ಐಪಿಎಲ್ ಗೆ ಮೊದಲು ಲಸಿಕೆ ಪಡೆಯಲು ನಿರಾಕರಿಸಿದ್ದ ಕ್ರಿಕೆಟಿಗರು

ಶನಿವಾರ, 15 ಮೇ 2021 (11:06 IST)
ಮುಂಬೈ: ಐಪಿಎಲ್ 14 ಆರಂಭಕ್ಕೆ ಮೊದಲು ಕ್ರಿಕೆಟಿಗರಿಗೆ ಕೊರೋನಾ ಲಸಿಕೆ ಪಡೆಯಲು ಅವಕಾಶವಿದ್ದರೂ ಅವರಿಗೇ ಇಷ್ಟವಿರಲಿಲ್ಲ ಎಂದು ವರದಿಯಾಗಿದೆ.


‘ಲಸಿಕೆ ನೀಡಲು ಮುಂದಾದಾಗ ಆಟಗಾರರಿಗೇ ಇಷ್ಟವಿರಲಿಲ್ಲ. ಅದು ಅವರ ತಪ್ಪಲ್ಲ. ಕೊರೋನಾ ಲಸಿಕೆ ಬಗ್ಗೆ ಇದ್ದ ಜಾಗೃತಿಯ ಕೊರತೆಯಿಂದ ಈ ರೀತಿ ಆಗಿರಬಹುದು’ ಎಂದು ಮೂಲಗಳು ಹೇಳಿವೆ.

ತಾವಿರುವ ಜೈವಿಕ ಸುರಕ್ಷಾ ವಲಯವೇ ಅತೀ ಸುರಕ್ಷಿತ ಎಂಬ ಮನೋಭಾವ ಆಟಗಾರರಲ್ಲಿತ್ತು. ಹೀಗಾಗಿ ವ್ಯಾಕ್ಸಿನ್ ಅಗತ್ಯವಿಲ್ಲ ಎಂದೇ ನಂಬಿದ್ದರು. ಆದರೆ ಅವರ ನಂಬಿಕೆ ಸುಳ್ಳಾಯಿತು. ಜೈವಿಕ ವಲಯದಲ್ಲಿದ್ದರೂ ಆಟಗಾರರಿಗೆ ಸೋಂಕು ತಗುಲಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ