ಮುಂಬೈ ಇಂಡಿಯನ್ಸ್ ಸೇರಿಕೊಂಡ ಹಿಟ್ ಮ್ಯಾನ್ ರೋಹಿತ್ ಶರ್ಮಾ

ಶನಿವಾರ, 11 ಸೆಪ್ಟಂಬರ್ 2021 (16:34 IST)
ದುಬೈ: ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ ರದ್ದಾದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಐಪಿಎಲ್ ತಂಡವನ್ನು ಕೂಡಿಕೊಂಡಿದ್ದಾರೆ.


ಯುಎಇನಲ್ಲಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಐಪಿಎಲ್ 14 ನೇ ಆವೃತ್ತಿಯ ಎರಡನೇ ಭಾಗದ ಪಂದ್ಯಗಳಲ್ಲಿ ಭಾಗಿಯಾಗಲು ರೋಹಿತ್ ತಮ್ಮ ಪತ್ನಿ ಮತ್ತು ಪುತ್ರಿಯೊಂದಿಗೆ ಅರಬರ ನಾಡಿಗೆ ಬಂದಿಳಿದಿದ್ದಾರೆ.

ಇದುವರೆಗೆ ಬಯೋ ಬಬಲ್ ವಾತಾವರಣದಲ್ಲಿದ್ದರಿಂದ ಟೀಂ ಇಂಡಿಯಾ ಆಟಗಾರರಿಗೆ ಇಲ್ಲಿ ವಿಶೇಷ ಕ್ವಾರಂಟೈನ್ ನಿಯಮ ಅನ್ವಯವಾಗದು. ರೋಹಿತ್ ಜೊತೆಗೆ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಟೀಂ ಇಂಡಿಯಾ ಕ್ರಿಕೆಟಿಗರಾದ ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಕೂಡಾ ಅಬುದಾಬಿಗೆ ಬಂದಿಳಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ