ಚೀನಾದಲ್ಲಿ ಭಾರತದ 'ಟೀ'ಗೆ ಹೆಚ್ಚಿದ ಬೇಡಿಕೆ

ಶನಿವಾರ, 1 ಮಾರ್ಚ್ 2014 (15:16 IST)
PR
ಬಿಜಿಂಗ್‌ : ಭಾರತದಲ್ಲಿ ಚಹಾ ಚೀನಾದಿಂದ ಬಂದಿದೆ ಎನ್ನಲಾಗುತ್ತದೆ ಆದರೆ ಚೀನಾದಲ್ಲಿ ಭಾರತದ ಚಹಾ ಪುಡಿಗೆ ಸಾಕಷ್ಟು ಬೇಡಿಕೆ ಇದೆ ಎಂದು ಚೀನಾದ ಮಾರುಕಟ್ಟೆಯ ಮೂಲಗಳು ತಿಳಿಸಿವೆ.

2015ರವರೆಗೆ ಚೀನಾದಲ್ಲಿ ಭಾರತದ ಚಹಾ ಪುಡಿ 10 ಕೋಟಿ ಕಿಲೋಗ್ರಾಂ ವರೆಗೂ ಮಾರುಕಟ್ಟೆಯಾಗಲಿದೆ ಎಂದು ಮಾರುಕಟ್ಟೆಯ ತಜ್ಞರು ತಿಳಿಸಿದ್ದಾರೆ. ಚೀನಾದ ಮಾರುಕಟ್ಟೆಯಲ್ಲಿ ಭಾರತೀಯ ಬ್ಲ್ಯಾಕ್‌ ಟೀಗೆ ಹೆಚ್ಚಿನ ಬೇಡಿಕೆಯಿದೆ. ಭಾರತದಲ್ಲಿ ಕೂಡ ಡಾರ್ಜಲಿಂಗ್ ಮತ್ತು ನೀಲಗೀರಿ ಚಹಾದ ಪ್ರಚಾರ ಜಾಸ್ತಿ ಇದೆ. ಇದೇ ಚಹಾ ಪುಡಿ ಚೀನಾದ ಯುವಕರಿಗೆ ಬಹಳ ಇಷ್ಟವಂತೆ,

ಚೀನಾದಲ್ಲಿ ಹಳೆಯ ಕಾಲದಿಂದಲೂ ಗ್ರೀನ್ ಟೀಗೆ ಹೆಚ್ಚಿನ ಬೇಡಿಕೆ ಇದೆ ಆದರೆ ಬ್ಲ್ಯಾಕ್‌ ಟೀ ಬಂದಾಗಿನಿಂದ ಗ್ರೀನ್‌ ಟೀಗಿಂತಲೂ ಹೆಚ್ಚಿಗೆ ಬೇಡಿಕೆ ಬ್ಲ್ಯಾಕ್‌ ಟೀಗೆ ಇದೆ ಎಂದು ಚೀನಾದ ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ