ಶಾಕಿಂಗ್ : ಬ್ಲಾಸ್ಟ್ ಆಗಿ ದಹಿಸಿ ಹೋದ ರಿಲಯನ್ಸ್ 4ಜಿ ಲೈಫ್ ಮೊಬೈಲ್

ಸೋಮವಾರ, 7 ನವೆಂಬರ್ 2016 (15:53 IST)
ನೀವು ರಿಲಯನ್ಸ್ 4ಜಿ ಲೈಫ್ ಮೊಬೈಲ್ ಫೋನ್ ಬಳಸುತ್ತಿದ್ದೀರಾ? ಹಾಗಾದ್ರೆ ಸ್ವಲ್ಪ ಎಚ್ಚರದಿಂದಿರಿ. ಸ್ಯಾಮ್‌ಸಂಗ್ ನೋಟ್ 7ನದ್ದಾಯಿತು. ಮತ್ತೀಗ ತಮ್ಮ  ರಿಲಯನ್ಸ್ 4ಜಿ ಲೈಫ್ ಮೊಬೈಲ್ ಸ್ಪೋಟಗೊಂಡಿದೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ. ಸುಟ್ಟು ಕರಕಲಾಗಿರುವ ಫೋನ್ ಚಿತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

ನನ್ನ ರಿಲಯನ್ಸ್ 4ಜಿ ಮೊಬೈಲ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿತು. ನಾನು ಮತ್ತು ನನ್ನ ಕುಟುಂಬ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದೆವು ಎಂದು ತನ್ವೀರ್ ಸಾದಿಕ್ ಎನ್ನುವವರು ಟ್ವೀಟ್ ಮಾಡಿದ್ದಾರೆ ಮತ್ತು ರಿಲಯನ್ಸ್ ಜಿಯೋ ಮತ್ತು ರಿಲಯನ್ಸ್ ಲೈಫ್‌ಗೆ ದೂರು ನೀಡಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸಿರುವ  ಲೈಫ್ ವಕ್ತಾರರು, ಗ್ರಾಹಕರ ಸುರಕ್ಷತತೆ ನಮಗೆ ಅತ್ಯಂತ ಪ್ರಮುಖವಾದುದು. ನಡೆದ ಘಟನೆಯ ಬಗ್ಗೆ ಬೇಸರವಿದೆ. ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಈ ಕುರಿತು ತನಿಖೆಯನ್ನು ನಡೆಸುತ್ತಿದ್ದೇವೆ.  ವರದಿ ಕೈಗೆ ಬಂದ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ. 
 
ವಿಶ್ವದ ಪ್ರಮುಖ ಮೊಬೈಲ್ ಫೋನ್ ತಯಾರಕರಿಂದ ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿ ಇದನ್ನು ತಯಾರಿಸಲಾಗುತ್ತದೆ. ಹೀಗೆಕಾಯಿತು ಎಂದು ತಿಳಿಯುತ್ತಿಲ್ಲ ಎಂದು ಅವರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. 
 
ರಿಲಯನ್ಸ್ ಜಿಯೋ ಅನಿಲಿಮಿಟ್ 4ಜಿ ಸಿಮ್ ಬಿಡುಗಡೆಗೊಳಿಸಿದ ಮೇಲೆ ರಿಲಯನ್ಸ್ ಲೈಫ್ ಮಾರಾಟದಲ್ಲಿ ಗಣನೀಯವಾಗಿ ಏರಿಕೆಯಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ