ದೇಶದ ಜಿಡಿಪಿಯ 10% ರಷ್ಟು ಸಂಪತ್ತು ಹೊಂದಿರುವ 20 ಭಾರತೀಯ ಬಿಲಿಯನೇರ್‌‌ಗಳು

ಶುಕ್ರವಾರ, 4 ಆಗಸ್ಟ್ 2017 (18:37 IST)
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವರದಿಯ ಪ್ರಕಾರ, ಈ ವರ್ಷದ ಕ್ಯಾಲೆಂಡರ್ ವರ್ಷದಲ್ಲಿ ಭಾರತದ 20 ಬಿಲಿಯನೇರ್ಗಳು ತಮ್ಮ ಒಟ್ಟು ಸಂಪತ್ತನ್ನು 50 ಶತಕೋಟಿ ಡಾಲರ್ಗೂ ಹೆಚ್ಚಿಸಿದ್ದಾರೆ.
 
ನವದೆಹಲಿ: ಪ್ರಸಕ್ತ ವರ್ಷದ ಆರಂಭಿಕ ಏಳು ತಿಂಗಳಲ್ಲಿ ದೇಶದ 20 ಬಿಲಿಯನೇರ್‌ ಶ್ರೀಮಂತರು ತಮ್ಮ ಆದಾಯದಲ್ಲಿ 50 ಬಿಲಿಯನ್ ಡಾಲರ್ ಹೆಚ್ಚಿಸಿಕೊಂಡಿದ್ದಾರೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ರಿಪೋರ್ಟ್ ವರದಿ ಮಾಡಿದೆ.  
 
ದೇಶದ 20 ಶ್ರೀಮಂತರ ಒಟ್ಟು ಸಂಪತ್ತು 200 ಬಿಲಿಯನ್ ಡಾಲರ್‌ಗಳಿಗೆ ತಲುಪಿದ್ದು, ದೇಶದ ಜಿಡಿಪಿಯ ಶೇ.10 ರಷ್ಟಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
 
ಶ್ರೀಮಂತ ಉದ್ಯಮಿಗಳ ಪಟ್ಟಿ (ಸಂಪತ್ತು ಬಿಲಿಯನ್ ಡಾಲರ್‌ಗಳಲ್ಲಿ)
 
ಉದ್ಯಮಿ ಮುಕೇಶ್ ಅಂಬಾನಿ 36.2 ಬಿಲಿಯನ್ ಡಾಲರ್, ಲಕ್ಷ್ಮಿ ಮಿತ್ತಲ್ 16.6 ಬಿಲಿಯನ್ ಡಾಲರ್, ಅಜೀಮ್ ಪ್ರೇಮ್‌ಜೀ 15.9, ಪಲ್ಲೋಂಜಿ ಮಿಸ್ತ್ರಿ 15.6, ಶಿವ್ ನಡಾರ್ 13.4, ದಿಲೀಪ್ ಶಾಂಘ್ವಿ 11.4, ಉದಯ್ ಕೋಟ್ಯಾಕ್ 10.2, ಕುಮಾರ್ ಬಿರ್ಲಾ 9.16, ಸೈರಸ್ ಪೂನಾವಾಲಾ 9.02, ಗೌತಮ್ ಆದಾನಿ 8.83, ವಿಕ್ರಂ ಲಾಲ್ 6.96, ಪಂಕಜ್ ಪಟೇಲ್ 6.67, ಬೇನುಗೋಪಾಲ್ ಬಂಗೂರ್ 6.50, ರಾಧಾಕಿಶನ್ ದಾಮನಿ 5.31, ಮಿಕಿ ಜಗ್ತಿಯಾನಿ 5.18 ಇಂದು ಜೈನ್ 5.09, ಕೆ.ಪಿ.ಸಿಂಗ್ 4.94, ಅಜಯ್ ಪಿರಾಮಲ್ 4.93, ಪ್ರಕಾಶ್ ಹಿಂದುಜಾ 4.89, ಅಶೋಕ್ ಹಿಂದುಜಾ 4.89, ರಾಹುಲ್ ಬಜಾಜ್ 4.46, ಕಲಾನಿಧಿ ಮಾರನ್ 3.95 ಬಿಲಿಯನ್ ಡಾಲರ್ಸ್. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ