ಸ್ಮಾರ್ಟ್‍ಫೋನ್‌ಗಳನ್ನು ಹೆಚ್ಚಾಗಿ ಬಳಸುತ್ತಿರುವವರ ಬಾಯಲ್ಲಿ ಈಗ ಕೇಳಿಬರುತ್ತಿರುವ ಹೆಸರು 4ಜಿ. ಮುಖ್ಯವಾಗಿ ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಅಡಿಯಿಟ್ಟ ಮೇಲೆ ಭಾರಿ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಉಚಿತ ಡಾಟಾ, ಕರೆಗಳು ಸೌಲಭ್ಯವನ್ನು 4ಜಿ ನೆಟ್‍ವರ್ಕ್‍ನಿಂದ ಪಡೆಯಬಹುದೆಂದು ಗೊತ್ತಾಗುತ್ತಿದ್ದಂತೆ ಉಳಿದ ಆಪರೇಟರ್‌ಗಳು ಕೊಡುಗೆಗಳನ್ನು ಪ್ರಕಟಿಸಲು ಆರಂಭಿಸಿದ್ದು ಗೊತ್ತೇ ಇದೆ.
ಇದರ ಪ್ರಭಾವ ಸ್ಮಾರ್ಟ್‌ಫೋನ್‌ಗಳ ಮೇಲೂ ಉಂಟಾಗಿದೆ. ಇಷ್ಟು ದಿನ 2ಜಿ, 3ಜಿ ಫೋನ್‌ಗಳನ್ನು ಬಳಸುತ್ತಿದ್ದವರೂ ಸಹ ಈಗ ಹೊಸ 4ಜಿ ಫೋನ್‌ಗೆ ಬದಲಾಗಿದ್ದಾರೆ. ಕಂಪನಿಗಳು ಕೊಡುತ್ತಿರುವ ಆಫರ್, ಬಜೆಟ್‌ಗೆ ತಕ್ಕಂತೆ ಗ್ರಾಹಕರು 4ಜಿ ಸೆಟ್‍ಗಳಿಗೆ ಮುಗಿಬಿದ್ದಿದ್ದಾರೆ.
ಮೊಬೈಲ್ ಬಳಕೆದಾರರ ಸಮೀಕ್ಷೆ 2016ರ ಪ್ರಕಾರ, ಭವಿಷ್ಯದಲ್ಲಿ 4ಜಿ ಬಳಕೆದಾರರ ಸಂಖ್ಯೆ ಹೆಚ್ಚಾಗಲಿದೆ. ಮುಂದಿನ 12 ತಿಂಗಳಲ್ಲಿ ಸುಮಾರು ಶೇ.45ರಷ್ಟು ಮಂದಿ 4ಜಿ ಅಥವಾ ಎಲ್‌ಟಿಇ ತಾಂತ್ರಿಕತೆಗೆ ಬದಲಾಗಲು ಬಳಕೆದಾರರು ಆಸಕ್ತಿ ತೋರಿಸುತ್ತಿದ್ದಾರಂತೆ. ಇಂಟರ್‌ನೆಟ್ ಬೆಲೆಗಳು ಕಡಿಮೆಯಾಗುತ್ತಿರುವುದು, ಡಾಟಾ ಬಳಕೆ ಹೆಚ್ಚುತ್ತಿರುವುದು, ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾಗುತ್ತಿದೆ ಎಂದು ಡೆಲಾಯಿಟ್ ತಿಳಿಸಿದೆ.