ನೋಟ್ ಬ್ಯಾನ್ ಬಳಿಕ ಶೇ.99ರಷ್ಟು ಹಳೇ ನೋಟುಗಳು ವಾಪಸ್: ಮೋದಿ ಪ್ಲಾನ್ ಸಕ್ಸಸ್ ಆಯ್ತಾ..?

ಬುಧವಾರ, 30 ಆಗಸ್ಟ್ 2017 (18:22 IST)
ಭಯೋತ್ಪಾದನೆ ಮತ್ತು ಕಪ್ಪು ಹಣ ತಡೆ ದೃಷ್ಟಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೈಗೊಂಡಿದ್ದ 500 ಮತ್ತು 1000 ರೂ. ಹಳೇ ನೋಟುಗಳ ಅಮಾನ್ಯೀಕರಣದ ಬಳಿಕ ಎಷ್ಟು ನೋಟುಗಳು ವಾಪಸ್ ಬಂದಿದೆ ಎಂಬ ಮಾಹಿತಿ ಬಹಿರಂಗಪಡಿಸಬೇಕೆಂದು ಆಗ್ರಹಿಸುತ್ತಿದ್ದ ವಿಪಕ್ಷಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಾರ್ಷಿಕ ವರದಿಯಲ್ಲಿ ಉತ್ತರ ಕೊಟ್ಟಿದೆ. ನೋಟು ಅಮಾನ್ಯದ ಬಳಿಕ ಶೇ. 99ರಷ್ಟು ನೋಟು ವಾಪಸ್ ಬಂದಿರುವುದಾಗಿ ರಿಸರ್ವ್ ಬ್ಯಾಂಕ್ ತಿಳಿಸಿದೆ.

ಚಲಾವಣೆಯಲ್ಲಿದ್ದ 15.44 ಲಕ್ಷ ಕೋಟಿಯಷ್ಟು 500 ಮತ್ತು 1000 ರೂ. ಹಳೇ ನೋಟುಗಳ ಪೈಕಿ 15.28 ಲಕ್ಷ ಕೋಟಿಯಷ್ಟು ನೋಟು ಅಂದರೆ ಶೇ. 99ರಷ್ಟು ನೋಟುಗಳು ವಾಪಸ್ ರಿಸರ್ವ್ ಬ್ಯಾಂಕ್ ಸೇರಿವೆ. 89 ಮಿಲಿಯನ್ 1000 ರೂ. ನೋಟುಗಳ ಪೈಕಿ 8900 ಕೋಟಿ ರೂ. ನಷ್ಟು ನೋಟು ವಾಪಸ್ ಬಂದಿಲ್ಲ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

ಇದೇವೇಳೆ, ಹೊಸದಾಗಿ ಚಲಾವಣೆಗೆ ಬಂದ 2000 ರೂ. ನೋಟು ನಗದು ವ್ಯವಹಾರದ ಶೇ. 50ರಷ್ಟಕ್ಕಿಂತಲೂ ಕೊಂಚ ಹೆಚ್ಚಾಗಿದೆ. ಹೊಸ ನೋಟುಗಳ ಮುದ್ರಣಕ್ಕೆ 7965 ಕೋಟಿ ರೂ. ವೆಚ್ಚ ಮಾಡಿರುವುದಾಗಿ ರಿಸರ್ವ್ ಬ್ಯಾಂಕ್ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ