ಅಂಚೆಕಚೇರಿಯ ಪಿಪಿಎಫ್‌, ಕೆವಿಪಿ ಠೇವಣಿಗಳಿಗೆ ಆಧಾರ ಸಂಖ್ಯೆ ಕಡ್ಡಾಯ

ಶುಕ್ರವಾರ, 6 ಅಕ್ಟೋಬರ್ 2017 (19:24 IST)
ಅಂಚೆ ಕಚೇರಿಗಳಲ್ಲಿ ಪಿಪಿಎಫ್‌, ಎನ್‌ಎಸ್‌ಎಸ್ ಮತ್ತು ಕಿಸಾನ್ ವಿಕಾಸ್ ಪತ್ರ ಯೋಜನೆಗಳಿಗೆ ಆಧಾರ ಕಾರ್ಡ್ ಕಡ್ಡಾಯಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
ಪ್ರಸ್ತುತ ಠೇವಣಿ ಹೊಂದಿರುವ ಠೇವಣಿದಾರರು ಡಿಸೆಂಬರ್ 31, 2017 ರೊಳಗೆ ಆಧಾರ ಕಾರ್ಡ್ ಸಂಖ್ಯೆಯನ್ನು ಅಂಚೆ ಕಚೇರಿಗೆ ನೀಡುವುದು ಕಡ್ಡಾಯವಾಗಿದೆ ಎಂದು ವಿತ್ತಸಚಿವಾಲಯದ ಮೂಲಗಳು ತಿಳಿಸಿವೆ.
 
ಕೇಂದ್ರದ ವಿತ್ತಸಚಿವಾಲಯ ಪ್ರತ್ಯೇಕವಾಗಿ ನಾಲ್ಕು ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಅಂಚೆ ಕಚೇರಿಯಲ್ಲಿರುವ ಪಿಪಿಎಫ್‌, ಎನ್‌ಎಸ್‌ಎಸ್ ಮತ್ತು ಕಿಸಾನ್ ವಿಕಾಸ್ ಪತ್ರ ಸೇರಿದಂತೆ ಎಲ್ಲಾ ಠೇವಣಿಗಳಿಗೆ ಅಧಾರ ಸಂಖ್ಯೆ ಕಡ್ಡಾಯಗೊಳಿಸಿದೆ. 
 
ಆಧಾರ ಸಂಖ್ಯೆ ಹೊಂದಿರದವರು ಆಧಾರ ಕಾರ್ಡ್ ಮಾಡಿಸಲು ಸಲ್ಲಿಸಿದ ಅರ್ಜಿಯ ದಾಖಲಾತಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ಕೇಂದ್ರ ಸರಕಾರ ಸೆಪ್ಟೆಂಬರ್ 29 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ