ಬಾಬಾ ರಾಮ್ ದೇವ್ ನಂತರ ಪತಂಜಲಿ ಉತ್ತರಾಧಿಕಾರಿ ಯಾರು?

ಭಾನುವಾರ, 1 ಅಕ್ಟೋಬರ್ 2017 (10:47 IST)
ನವದೆಹಲಿ: ದೇಶೀಯ  ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದ ಬಾಬಾ ರಾಮ್ ದೇವ್ ತಮ್ಮ ನಂತರದ ಉತ್ತರಾಧಿಕಾರಿ ಯಾರು ಎಂದು ಬಹಿರಂಗಪಡಿಸಿದ್ದಾರೆ.


ಸುಮಾರು 10 ಸಾವಿರ ಕೋಟಿ ಮೌಲ್ಯದ ಪತಂಜಲಿ ಉತ್ಪನ್ನ ಸಂಸ್ಥೆಯನ್ನು ರಾಮ್ ದೇವ್ ನಂತರ ಮುನ್ನಡೆಸುವವರು ತಮ್ಮ 500 ಶಿಷ್ಯರೇ ಎಂದು ಖಾಸಗಿ ವಾಹಿನಿಯೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಮುಂದಿನ ನಾಲ್ಕು ವರ್ಷಗಳಲ್ಲಿ ತಮ್ಮ ಸಂಸ್ಥೆಯನ್ನು ಬಹುರಾಷ್ಟ್ರೀಯ ಕಂಪನಿಯ ಸ್ತರಕ್ಕೆ ಏರಿಸುವುದು ತಮ್ಮ ಉದ್ದೇಶ ಎಂದು ರಾಮ್ ದೇವ್ ಹೇಳಿಕೊಂಡಿದ್ದಾರೆ. ಪತಂಜಲಿ ನೂಡಲ್ಸ್, ಟೂತ್ ಪೇಸ್ಟ್ ಸೇರಿದಂತೆ ಹಲವು ಉತ್ಪನ್ನಗಳು ಜನಪ್ರಿಯವಾಗಿದ್ದವು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ