ಮಾರ್ಚ್ 1 ರ ನಂತ್ರ ಎಟಿಎಂನಿಂದ ಎಷ್ಟು ಬೇಕಾದ್ರೂ ಹಣ ಪಡೆಯಬಹುದಂತೆ

ಗುರುವಾರ, 26 ಜನವರಿ 2017 (13:13 IST)
ಎಟಿಎಂನಿಂದ ಹಣ ತೆಗೆಯುವ ಮಿತಿಯನ್ನು ಫೆಬ್ರವರಿ ಅಂತ್ಯಕ್ಕೆ ಕೊನೆಗಾಣಿಸಲು ಆರ್‌ಬಿಐ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 
 
ಪ್ರತಿದಿನ ಎಟಿಎಂಗಳಿಂದ 2000 ರೂಪಾಯಿಗಳವರೆಗೆ ಹಣ ಹಿಂಪಡೆಯುವ ಮಿತಿಯನ್ನು 4500 ರೂಪಾಯಿಗಳಿಗೆ ಏರಿಕೆಗೊಳಿಸಿದ್ದ ಆರ್‌ಬಿಐ, ವಾರಕ್ಕೆ 24 ಸಾವಿರ ರೂಪಾಯಿಗಳನ್ನು ಮಾತ್ರ ಹಿಂಪಡೆಯಲು ಅವಕಾಶ ನೀಡಿತ್ತು. ಇದೀಗ ಫೆಬ್ರವರಿ ಅಂತ್ಯಕ್ಕೆ ಹಣ ಹಿಂಪಡೆಯುವ ಮಿತಿ ತೆಗೆದುಹಾಕಲು ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
 
ನೋಟ್ ನಿಷೇಧಗೊಂಡ ಆರಂಭದಲ್ಲಿ 2500 ರೂ. ಹಣವನ್ನು ಎಟಿಎಂನಿಂದ ತೆಗೆಯಲು ಅನುಮತಿ ನೀಡಿತ್ತು. ಇದಾದ ಬಳಿಕ ಈ ಮಿತಿಯನ್ನು 4,500 ರೂ. ಗೆ ಏರಿಸಿ ಬಳಿಕ ಜನವರಿ ಮೂರನೇ ವಾರದಲ್ಲಿ ಈ ಮಿತಿಯನ್ನು 10 ಸಾವಿರ ರೂ.ಗೆ ಏರಿಸಲಾಗಿತ್ತು.
 
ಪ್ರಸ್ತುತ ಉಳಿತಾಯ ಖಾತೆಯನ್ನು ಹೊಂದಿರುವ ಗ್ರಾಹಕರು ವಾರದಲ್ಲಿ 24 ಸಾವಿರ ರೂ, ಕರೆಂಟ್ ಖಾತೆಯನ್ನು ಹೊಂದಿರುವ ಗ್ರಾಹಕರು ವಾರದಲ್ಲಿ 1 ಲಕ್ಷ ರೂ. ಹಣವನ್ನು ಡ್ರಾ ಮಾಡಲು ಆರ್‌ಬಿ ಅನುಮತಿ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ