₹50 ಕೋಟಿ ನಂತರ ನೋಟು ಎಣಿಸಲಾಗದೆ ಕೆಟ್ಟು ಹೋದ ಯಂತ್ರ
ಆದಾಯ ತೆರಿಗೆ ಇಲಾಖೆಯು ಒಡಿಶಾ ಮತ್ತು ಜಾರ್ಖಂಡ್‌ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ದಾಳಿ ನಡೆಸಿದೆ . ಅಧಿಕಾರಿಗಳ ಪ್ರಕಾರ, ಒಡಿಶಾದ ಬೋಲಂಗಿರ್ ಮತ್ತು ಸಂಬಲ್‌ಪುರ ಮತ್ತು ಜಾರ್ಖಂಡ್‌ನ ರಾಂಚಿ, ಲೋಹರ್ದಗಾದಲ್ಲಿ ಶೋಧ ನಡೆಸಲಾಗಿದೆ.
ಗುರುವಾರದವರೆಗೆ 50 ಕೋಟಿ ರೂಪಾಯಿಗಳವರೆಗಿನ ನೋಟುಗಳ ಎಣಿಕೆ ಪೂರ್ಣಗೊಂಡಿದೆ. ಆದರೆ ನೋಟುಗಳ ಸಂಖ್ಯೆ ತುಂಬಾ ಹೆಚ್ಚಾಗಿರುವುದರಿಂದ ಯಂತ್ರಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ” ಎಂದು ಮೂಲಗಳು ತಿಳಿಸಿವೆ.