1,000 ರೂ. ನೋಟ್ ಪರಿಚಯಿಸುವ ಉದ್ದೇಶ ಇಲ್ಲ: RBI

ಶುಕ್ರವಾರ, 9 ಜೂನ್ 2023 (11:52 IST)
ಆರ್ಥಿಕ ವರ್ಷ 2024 ರ ಎರಡನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಅನಾವರಣಗೊಳಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಬಿಐ 500 ರೂ. ನೋಟುಗಳನ್ನು ಹಿಂತೆಗೆದುಕೊಳ್ಳುವ ಅಥವಾ 1,000 ರೂ. ಮುಖಬೆಲೆಯ ನೋಟುಗಳನ್ನು ಮರು ಪರಿಚಯಿಸುವ ಬಗ್ಗೆ ಯೋಚಿಸುತ್ತಿಲ್ಲ, ಊಹಾಪೋಹ ಮಾಡದಂತೆ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.

2,000 ನೋಟುಗಳನ್ನು ಚಲಾವಣೆಯಿಂದ ಹಿಂದೆ ಪಡೆದ ಬಳಿಕ ಮಾರುಕಟ್ಟೆಯಲ್ಲಿದ್ದ 3.62 ಲಕ್ಷ ಕೋಟಿ ರೂ. ಪೈಕಿ 1.82 ಲಕ್ಷ ಕೋಟಿ ರೂ. ಬ್ಯಾಂಕುಗಳಿಗೆ ಮರಳಿದೆ. ಇದರ ಪ್ರಮಾಣ 50% ರಷ್ಟಾಗಿದೆ. ಬ್ಯಾಂಕುಗಳಿಗೆ ಬಂದ ಹಣದ ಪೈಕಿ 85% ರಷ್ಟು ನೋಟುಗಳು ಬ್ಯಾಂಕ್ ಠೇವಣಿಗಳಾಗಿ ಹಿಂತಿರುಗಿದರೆ, ಉಳಿದ ಪ್ರಮಾಣದ ಹಣ ನೋಟು ವಿನಿಮಯಕ್ಕಾಗಿ ಬಂದಿವೆ ಎಂದು ಅವರು ತಿಳಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ