ಕೇವಲ ರೂ.799ಕ್ಕೆ ವಿಮಾನ ಟಿಕೆಟ್‌ಗಳು

ಮಂಗಳವಾರ, 10 ಜನವರಿ 2017 (12:35 IST)
ಪ್ರಮುಖ ವಿಮಾನಯಾನ ಸಂಸ್ಥೆ ಏರ್ ಏಷ್ಯಾ ಇಂಡಿಯಾ ತನ್ನ ಪ್ರಯಾಣಿಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಟಿಕೆಟ್‌ಗಳನ್ನು ಕೊಡುತ್ತಿರುವುದಾಗಿ ಪ್ರಕಟಿಸಿದೆ. 2017 ಹರ್ಲಿ ಬರ್ಡ್ ಸೇಲ್ ಹೆಸರಿನ ಈ ಕೊಡುಗೆ ಮೂಲಕ ರೂ. 799ಕ್ಕೆ ಆರಂಭಿಕ ದರ ನಿಗದಿ ಮಾಡಿದೆ. 
 
2017 ಮೇ 1ರಿಂದ 2018 ಫೆಬ್ರವರಿ 6ರವರೆಗೂ ಪ್ರಯಾಣಿಸುವವರಿಗೆ ಈ ಆಫರ್ ಅನ್ವಯಿಸಲಿದೆ. ಜನವರಿ 15ರಂದು ಆಫರ್ ಕೊನೆಯಾಗುತ್ತಿದೆ ಎಂದು ಪ್ರಕಟಿಸಿದೆ. ಎಲ್ಲಿಂದ ಎಲ್ಲಿಗೆ ಎಷ್ಟಾಗಲಿದೆ ಎಂಬ ದರಪಟ್ಟಿಯನ್ನೂ ಏರ್ ಏಷ್ಯಾ ಬಿಡುಗಡೆ ಮಾಡಿದೆ.
 
* ಬೆಂಗಳೂರು-ಕೊಚ್ಚಿ ರೂ.999
* ಇಂಫಾಲ್-ಗುವಾಹಟಿ ರೂ.799
* ಕೊಚ್ಚಿ-ಹೈದರಾಬಾದ್ ರೂ.1,499
* ಹೈದರಾಬಾದ್-ಗೋವಾ ರೂ.1499
*ಚಂಡಿಗಢ-ಬೆಂಗಳೂರು ರೂ.2,999
 
ವಿಮಾನ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏರ್‌ಲೈನ್ ಕಂಪನಿಗಳು ವಿವಿಧ ಆಫರ್‌ಗಳನ್ನು ಪ್ರಕಟಿಸುತ್ತಿವೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದ ಪ್ರಕಾರ, ಜನವರಿ 2016ರಿಂದ ನವೆಂಬರ್ ವರೆಗೆ ವಿಮಾನಯಾನ ಮಾಡುವವರ ಸಂಖ್ಯೆ ಶೇ.23ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ