ಬೆಂಗಳೂರು: ದಾಖಲೆಯ ಬೆಲೆ ಏರಿಕೆ ಕಂಡಿರುವ ಚಿನ್ನದ ಬೆಲೆ ಇಂದು ಕೊಂಚ ಮಟ್ಟಿಗೆ ಇಳಿಕೆಯಾಗಿದ್ದು ಗ್ರಾಹಕರ ಮೊಗದಲ್ಲಿ ಸಮಾಧಾನ ಮೂಡಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲ್ಲಣವಾಗಿದ್ದು ಚಿನ್ನದ ಬೆಲೆಯೂ ಭಾರೀ ಏರಿಕೆಯಾಗುತ್ತಲೇ ಇದೆ. ಕಳೆದ ನಾಲ್ಕೈದು ದಿನಗಳಿಂದ ಪರಿಶುದ್ಧ ಚಿನ್ನದ ದರ ನಿರಂತರವಾಗಿ ಏರಿಕೆಯಾಗಿತ್ತು. ಇಂದು ಕೊಂಚ ಮಟ್ಟಿಗೆ ಇಳಿಕೆಯಾದರೂ ಬೆಲೆ ಮಾತ್ರ ಇನ್ನೂ ಲಕ್ಷವನ್ನೂ ಮೀರಿಸಿದೆ. ನಿನ್ನೆ ಪರಿಶುದ್ಧ ಚಿನ್ನದ ದರ 1,02, 645.00 ರೂ.ಗಳಷ್ಟಿತ್ತು. ಇಂದು ಕೊಂಚ ಏರಿಕೆಯಾಗಿದ್ದು 1,02, 270.00 ರೂ.ಗಳಿಗೆ ಬಂದು ನಿಂತಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕೊಂಚ ಮಟ್ಟಿಗೆ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 60 ರೂ. ಇಳಿಕೆಯಾಗಿದ್ದು 10,048 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 55 ರೂ. ಇಳಿಕೆಯಾಗಿದ್ದು 9,210 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 45 ರೂ. ಇಳಿಕೆಯಾಗಿದ್ದು 7,536 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರದಲ್ಲೂ ಕಳೆದ ಕೆಲವು ದಿನಗಳಿಂದ ದಾಖಲೆಯ ಬೆಲೆ ಏರಿಕೆಯಾಗಿತ್ತು. ಆದರೆ ಇಂದು ತಕ್ಕಮಟ್ಟಿಗೆ ಇಳಿಕೆಯಾಗಿದೆ. ಇಂದು ಬೆಳ್ಳಿ ದರ ಪ್ರತೀ ಕೆ.ಜಿ.ಗೆ 2000 ರೂ.ಗಳಷ್ಟು ಇಳಿಕೆಯಾಗಿದೆ. ಇಂದು ಪ್ರತೀ ಕೆ.ಜಿ. ಬೆಳ್ಳಿ ದರ 1,10, 000 ರೂ. ಗೆ ಬಂದು ತಲುಪಿದೆ.