ಹೊಸ ಐಫೋನ್ ಖರೀದಿಸುವ ಏರ್ ಟೆಲ್ ಗ್ರಾಹಕರು ಹುಷಾರ್!
ಆಪಲ್ ಸಂಸ್ಥೆ ಕೊನೆಗೂ ಡ್ಯುಯಲ್ ಸಿಮ್ ಅಳವಡಿಸಬಹುದಾದ ಐಫೋನ್ ಒಂದನ್ನು ಬಿಡುಗಡೆ ಮಾಡಿದೆ. ಆದರೆ ಭಾರತದ ಗ್ರಾಹಕರಿಗೆ ಒಂದು ಷರತ್ತೂ ಕೂಡಾ ಅನ್ವಯವಾಗಲಿದೆ.
ಈ ಡ್ಯುಯಲ್ ಸಿಮ್ ಗಳ ಪೈಕಿ ಒಂದು ಇಸಿಮ್ ಮತ್ತು ಇನ್ನೊಂದು ನ್ಯಾನೋ ಸಿಮ್ ಸ್ಲಾಟ್ ಇರಲಿದೆ. ಸದ್ಯಕ್ಕೆ ಜಿಯೋ ಮಾತ್ರ ಪೋಸ್ಟ್ ಪೇಯ್ಡ್ ಮತ್ತು ಪ್ರಿಪೈಯ್ಡ್ ಗ್ರಾಹಕರಿಗೆ ಇ ಸಿಮ್ ಸೌಲಭ್ಯ ನೀಡಿದೆ. ಏರ್ ಟೆಲ್ ಗ್ರಾಹಕರಿಗೆ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರ ಇ ಸಿಮ್ ಸೌಲಭ್ಯ ಸಿಗುತ್ತಿದೆ. ಹೀಗಾಗಿ ಒಂದು ವೇಳೆ ನೀವು ಪ್ರಿಪೇಯ್ಡ್ ಗ್ರಾಹಕರಾಗಿದ್ದು, ಈ ಫೋನ್ ಖರೀದಿಸಬೇಕಾದರೆ ಪೋಸ್ಟ್ ಪೇಯ್ಡ್ ಪ್ಲ್ಯಾನ್ ಗೆ ಬದಲಾಯಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಹೊಸ ಫೋನ್ ಖರೀದಿಸುವ ಮೊದಲು ಈ ಅಂಶಗಳು ಗಮನದಲ್ಲಿರಲಿ.