ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ದಾಖಲೆ ಏರಿಕೆ
ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ. ಗೆ 86.25 ರೂ. ಮತ್ತು ಡೀಸೆಲ್ ಬೆಲೆ 75.12 ರೂ. ವರೆಗೆ ತಲುಪಿದ್ದು, ಇದು ದಾಖಲೆಯಾಗಿದೆ. ಇದುವರೆಗೆ ಮಹಾನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಈ ಮಟ್ಟಿಗೆ ಏರಿಕೆ ಕಂಡಿರಲಿಲ್ಲ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಯಲ್ಲಿ ಆಗುತ್ತಿರುವ ಏರಿಕೆಯಿಂದಾಗಿ ತೈಲ ಬೆಲೆಯಲ್ಲಿ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಮಹಾರಾಷ್ಟ್ರದ ಪೆಟ್ರೋಲ್, ಡೀಸೆಲ್ ಡೀಲರ್ ಗಳ ಸಂಘ ಹೇಳಿದೆ. ಇದು ವಾಹನ ಸವಾರರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.