ಏರ್‌ಟೆಲ್ ಪ್ರಮುಖ ಹುದ್ದೆಗೆ ಸುನಿಲ್ ನೇಮಕ

ಮಂಗಳವಾರ, 6 ಡಿಸೆಂಬರ್ 2016 (11:14 IST)
ಟೆಲಿಕಾಂ ಸೇವೆಗಳ ಸಂಸ್ಥೆ ಭಾರತಿ ಏರ್‌ಟೆಲ್ ಕೊಡುತ್ತಿರುವ ಡಿಟಿಎಚ್ ಸೇವಾ ವಿಭಾಗಕ್ಕೆ ಸಿಇಓ, ಡೈರೆಕ್ಟರ್ ಆಗಿ ಸುನಿಲ್ ತಲ್ದಾರ್ ಆಯ್ಕೆಯಾಗಿದ್ದಾರೆ. ಸದ್ಯಕ್ಕೆ ಆ ಪದವಿಯಲ್ಲಿದ್ದ ಶಶಿ ಅರೋರಾ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ಗೆ ಎಂಡಿ, ಸಿಇಓ ಆಗಿ ಪದವಿ ಸ್ವೀಕರಿಸಿದ್ದಾರೆ.
 
ಈ ಮೂಲಕ ಸುನಿಲ್ ಪ್ರಮುಖ ಪದವಿಯನ್ನು ಅಲಂಕರಿಸಿದ್ದಾರೆ ಎಂದು ಏರ್‌ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ. ಇವರು ಗೋಪಾಲ್ ವಿಠಲ್ ಅವರಿಗೆ ರಿಪೋರ್ಟ್ ಮಾಡಿಕೊಳ್ಳಬೇಕು. ಏರ್‌ಟೆಲ್ ಡಿಜಿಟಲ್ ಟಿವಿ ಸೇವೆಗಳನ್ನು ತಲ್ದಾರ್ ಇನ್ನಷ್ಟು ವಿಸ್ತರಿಸುತ್ತಾರೆ ಎಂಬ ಆಶಾಭಾವ ಕಂಪನಿಯದು. 
 
"ನಮ್ಮ ನಾಯಕತ್ವದ ತಂಡದಲ್ಲಿ ಸುನಿಲ್ ಭಾಗಿಯಾಗಿರುವುದು ತುಂಬಾ ಸಂತೋಷ ತಂದಿದೆ. ಡಿಟಿಎಚ್ ವಿಭಾಗ ಇನ್ನಷ್ಟು ಶಕ್ತಿತುಂಬಲು ಅವರು ಸತತ ಕೃಷಿ ಮಾಡುತ್ತಾರೆ ಎಂದುದ್ ಆಶಿಸುತ್ತೇವೆ " ಎಂದು ಭಾರತಿ ಏರ್‌ಟೆಲ್ ಎಂಡಿ, ಸಿಇಓ (ಭಾರತ, ದಕ್ಷಿಣ ಏಷ್ಯಾ) ಗೋಪಾಲ್ ವಿಠಲ್ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ