ಜಿಯೋ ಪ್ರವೇಶದಿಂದ ಕಂಗಾಲಾದ ಏರ್‌ಟೆಲ್, ವೋಡಾ, ಐಡಿಯಾ ಕಂಪೆನಿಗಳಿಂದ ಕರೆ ದರ ಕಡಿತ

ಬುಧವಾರ, 31 ಆಗಸ್ಟ್ 2016 (12:59 IST)
ರಿಲಯನ್ಸ್ ಜಿಯೋ 4ಜಿ ವಾಣಿಜ್ಯ ಸೇವೆ ಬಿಡುಗಡೆ ಸಮೀಪಿಸುತ್ತಿದ್ದಂತೆ, ಸ್ಥಾನಿಕ ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್. ವೋಡಾಫೋನ್ ಹಾಗೂ ಐಡಿಯಾ ಕಂಪೆನಿಗಳು ಎದುರಾಳಿ ಕಂಪೆನಿಗೆ ಸ್ಪರ್ಧೆಯನ್ನು ನೀಡಲು ಗ್ರಾಹಕರ ಕರೆ ದರಗಳಲ್ಲಿ ಕಡಿತಗೊಳಿಸಿದ್ದಲ್ಲದೇ ಉಚಿತ ಕರೆಗಳು ಮತ್ತು ಕಡಿಮೆ ದರದಲ್ಲಿ ಡೇಟಾ ಸೇವೆ ನೀಡಲು ಮುಂದಾಗಿವೆ. 
 
ಟೆಲಿಕಾಂ ಉದ್ಯಮದ ಕಂಪೆನಿಗಳು ಭಾರತಿ ಏರ್‌ಟೆಲ್, ವೋಡಾಫೋನ್ ಮತ್ತು ಐಡಿಯಾ ಕಂಪೆನಿಗಳೊಂದಿಗೆ ವಿವಿಧ ಡೇಟಾಗಳ ದರ ನಿಗದಿ ಸಮರದಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ. 
 
ಭಾರತದ ಟೆಲಿಕಾಂ ವಲಯದಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತೀಯ ಏರ್‌ಟೆಲ್, ನಿನ್ನೆಯಷ್ಟೇ ಡೇಟಾ ಸೇವೆಗಳಿಗೆ ಸಂಬಂಧಿಸಿದಂತೆ ಎರಡು ಹೊಸ ಯೋಜನೆಗಳನ್ನು ಘೋಷಿಸಿದ್ದು, ಶೇ.80 ರಷ್ಟು ದರ ಕಡಿತಗೊಳಿಸಿದೆ ಎನ್ನಲಾಗಿದೆ. 
 
ಭಾರತೀಯ ಟೆಲಿಕಾಂ ವಲಯದಲ್ಲಿ ಜಿಯೋ 4ಜಿ ಎಂಟ್ರಿ ನೀಡುತ್ತಿದ್ದಂತೆ, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮತ್ತಷ್ಟು 4ಜಿ ಹ್ಯಾಂಡ್‌ಸೆಟ್‌ ಹಾಗೂ ಡೇಟಾ ಸೇವೆಯನ್ನು ನೀಡುವುದಾಗಿ ಹೇಳಿಕೊಂಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ