ಈ ಆಪ್‌ಗಳು ನಿಮ್ಮ ಫೋನಲ್ಲಿದ್ದರೆ ಕೂಡಲೆ ತೆಗೆದುಬಿಡಿ

ಬುಧವಾರ, 7 ಡಿಸೆಂಬರ್ 2016 (11:20 IST)
ಈಗ ಸ್ಮಾರ್ಟ್‌ಫೋನ್ ಎಂಬುದು ಕೇವಲ ಫೋನ್ ಮಾಡಕ್ಕಷ್ಟೇ ಸೀಮಿತವಾಗಿಲ್ಲ. ಬ್ಯಾಂಕಿಂಗ್, ಹಣಕಾಸು ವ್ಯವಹಾರಳು, ಇ ವಾಲೆಟ್‌ಗಳು ಅದೂಇದೂ ಅಂತ ಸಾಕಷ್ಟು ಖಾಸಗಿ ವಿಷಯಗಳಿಗೆ ಬಳಕೆಯಾಗುತ್ತಿದೆ. 
 
ಯಾವುದಾದರೂ ವೈರಸ್ ತಗುಲಿದರೆ ಅಷ್ಟೇ ನಿಮ್ಮೆಲ್ಲಾ ಅಮೂಲ್ಯವಾದ ಮಾಹಿತಿ ಮಠ ಸೇರುತ್ತೆ. ಆ ರೀತಿಯ ಕೆಲವು ಆಪ್‌ಗಳು ವೈರಸ್‌ಗಳನ್ನು ಹರಡುತ್ತಿವೆ. ಈ ಆಪ್‌ಗಳು ನಿಮ್ಮ ಫೋನಲ್ಲಿದ್ದರೆ ಕೂಡಲೆ ತೆಗೆದುಬಿಡಿ. 
 
ಕ್ಲೀನ್ ಮಾಸ್ಟರ್, ಯೂಟ್ಯೂಬ್ ಡೌನ್‌ಲೋಡರ್, ಪರ್ಫೆಕ್ಟ್ ಕ್ಲೀನರ್, ಡೆಮೊ, ವೈಫೈ ಎನಾನ್ಸರ್, ಸ್ನೇಕ್, ಗ್ಲಾ, ಎಚ್‍ಟಿಎಂಎಲ್ 5 ಗೇಮ್ಸ್, ಮೆಮೊರಿ ಬೂಸ್ಟರ್, ಸ್ಟಾಪ್ ವಾಚ್, ಕ್ಲಿಯರ್, ಬಾಲ್ಸ್ ಮೂವ್, ಫ್ಲಾಶ್ ಲೈಟ್ ಫ್ರೀ, ಟಚ್ ಬ್ಯೂಟಿ, ಡಿಮಾಂಡ್, ಸ್ಮಾಲ್ ಬ್ಲೂ ಪಾಯಿಂಟ್, ಬ್ಯಾಟರಿ ಮಾನಿಟರ್, ಯೂಸಿ ಮಿನಿ, ಶಾಡೋ ಕ್ರಷ್, ಸೆಕ್ಸ್ ಫೋಟೋ, ಹಿಪ್ ಗುಡ್, ಫೋನ್ ಬೂಸ್ಟರ್, ಸೆಟ್ಟಿಂಗ್ಸ್ ಸರ್ವೀಸ್, ವೈಫೈ ಮಾಸ್ಟರ್, ಫ್ರೂಟ್ ಸ್ಲಾಟ್ಸ್, ಸಿಸ್ಟಮ್ ಬೂಸ್ಟರ್, ಡೈರೆಕ್ಟ್ ಬ್ರೌಸರ್, ಫನ್ನಿ ಡ್ರಾಪ್ಸ್, ಪಜಿಲ್ ಬಬುಲ್, ಪೆಟ್ ಪ್ಯಾರಡೈಸ್, ಜಿಪಿಎಸ್, ಲೈಟ್ ಬ್ರೌಸರ್ ಇನ್ನೂ ಮುಂತಾದ ಆಪ್‌ಗಳಿಂದ ಹೊಸ ತರದ ಗೂಲಿಗನ್ ವೈರಸ್ ಹರಡುತ್ತಿದೆ. 
 
ಈ ಆಪ್‍ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್ ಮಾಡಿಕೊಳ್ಳಬೇಡಿ ಎಂದು ನಿಪುಣರು ಸೂಚಿಸುತ್ತಿದ್ದಾರೆ. ಒಂದು ವೇಳೆ ನಿಮ್ಮ ಮೊಬೈಲ್ ಕಾರ್ಯವೈಖರಿ ಬಗ್ಗೆ ಅನುಮಾನ ಬಂದರೆ ಕೂಡಲೆ ಸ್ವಿಚ್ ಆಫ್ ಮಾಡಿ, ಸರ್ವೀಸ್ ಸೆಂಟರ್‌ಗೆ ತೆಗೆದುಕೊಂಡು ಹೋಗಿ ಹೊಸ ಸಾಫ್ಟ್‌ವೇರ್ ಹಾಕಿಕೊಳ್ಳಬೇಕು ಎಂದು ಸೆಕ್ಯುರಿಟಿ ತಜ್ಞರು ಸೂಚಿಸಿದ್ದಾರೆ. ಹಾಗೆಯೇ ಗೂಗಲ್ ಅಕೌಂಟ್ ಪಾಸ್‌ವರ್ಡ್ ಸಹ ಬದಲಾಯಿಸಿಕೊಳ್ಳಲು ಸಲಹೆ ನೀಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ