ಸ್ಮಾರ್ಟ್‌ಫೋನ್ ಬ್ಯಾಟರಿ ಬಗ್ಗೆ ಆಪಲ್ ಶಾಕಿಂಗ್ ನ್ಯೂಸ್

ಗುರುವಾರ, 8 ಡಿಸೆಂಬರ್ 2016 (10:16 IST)
ಇಷ್ಟು ದಿನ ಬ್ಯಾಟರಿಯಲ್ಲಿ ದೋಷ ಕಂಡುಬಂದು ಸ್ಯಾಂಸಂಗ್ ನೋಟ್ 3 ಮೊಬೈಲ್‌ಗಳು ಸ್ಫೋಟಗೊಳ್ಳುತ್ತಿದ್ದ ಕಾರಣ ಅದರ ಮಾರಾಟ ನಿಲ್ಲಿಸಲಾಯಿತು. ಆದರೆ ಭದ್ರತೆ, ಮೇಕಿಗ್, ಸುರಕ್ಷೆ ವಿಚಾರದಲ್ಲಿ ಆಪರ್ ಸ್ಮಾರ್ಟ್‍ಫೋನ್‌ಗಳು ತನಗೆ ತಾನೇ ಸಾಟಿ ಎಂಬಂತಿದ್ದವು. ಈಗ ಅವುಗಳ ಬ್ಯಾಟರಿಯಲ್ಲೂ ದೋಷ ಕಂಡುಬಂದಿದೆ.
 
ಇತ್ತೀಚೆಗೆ ಐಫೋನ್ 6ಎಸ್ ಬ್ಯಾಟರಿ ಸಮಸ್ಯೆ ಗಂಭೀರವಾಗಿರುವುದನ್ನು ಆಪಲ್ ಕಂಪನಿ ಅಂಗೀಕರಿಸಿದೆ. ತಾವು ಮೊದಲು ಊಹಿಸಿದ್ದಕ್ಕಿಂತ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ ಎಂದು ಭಾವಿಸಿರುವುದಾಗಿ ಒಪ್ಪಿಕೊಂಡಿದೆ. ಆರಂಭದಲ್ಲಿ ಕೆಲವು ಸೆಟ್‌ಗಳಿಗಷ್ಟೇ ಸೀಮಿತವಾಗಿದೆ ಎಂದು ಆಪಲ್ ಹೇಳುತ್ತಾ ಬಂದಿತ್ತು.
 
ಆದರೆ ಸ್ಥಳೀಯ ಏಜನ್ಸಿಗಳಿಂದ ತೀವ್ರ ಒತ್ತಡ ಬಂದ ಮೇಲೆ ಕೊನೆಗೆ ಚೀನಾ ವೈಬ್‌ಸೈಟ್ ಒಂದರಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಮಂಗಳವಾರ ನೋಟೀಸೊಂದನ್ನು ವೆಬ್‌ಸೈಟಿನಲ್ಲಿ ಪೋಸ್ಟ್ ಮಾಡಿದೆ. ಈ ಸಮಸ್ಯೆಗೆ ಪ್ರಮುಖ ಕಾರಣ ಸಾಫ್ಟ್‌ವೇರ್‌ನಲ್ಲಿ ದೋಷ ಎಂದು ಭಾವಿಸುತ್ತಿರುವುದಾಗಿ ಹೇಳಿದೆ. 
 
ಇದನ್ನು ಸರಿಮಾಡಲು ಹೆಚ್ಚಿನ ಡಾಟಾ ಬೇಕಾಗುತ್ತದೆ ಎಂದು ಕಂಪನಿ ಭಾವಿಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ಚೈನೀಸ್ ವಾಚ್ ಡಾಗ್, ಆಪಲ್ 6ಎಸ್ ಜೊತೆಗೆ 5ಎಸ್ ಸೆಟ್‌ಗಳಲ್ಲೂ ಈ ಸಮಸ್ಯೆ ಇರುವುದಾಗಿ ವರದಿ ಮಾಡ್ದಿದೆ. ಆದರೆ ಈ ಬಗ್ಗೆ ಆಪಲ್ ಕಂಪನಿ ಪ್ರತಿಕ್ರಿಯಿಸಿಲ್ಲ. 
 
ಐಫೋನ್ 6ಎಸ್ ಆಕಸ್ಮಿಕವಾಗಿ ಶಟ್‍ಡೌನ್ ಆಗುವುದು, ಸ್ಫೋಟಗೊಳ್ಳುತ್ತಿರುವ ಬಗ್ಗೆ ಬಳಕೆದಾರರು ದೂರಿದ್ದರು. ಇದರಿಂದ ಸಮಸ್ಯೆ ಇದೆ ಎಂದು ಒಪ್ಪಿಕೊಂಡಿರು ಕಂಪನಿ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಕೊಂಡುಕೊಂಡ ಐಫೋನ್ 6ಎಸ್ ಬ್ಯಾಟರಿಯನ್ನು ಉಚಿತವಾಗಿ ರಿಪೇರಿ ಮಾಡಿಕೊಡುತ್ತೀವಿ ಎಂದು ಹೇಳಿದೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ