ಭಾನುವಾರ ನಮ್ಮ ಮೆಟ್ರೋ ವ್ಯತ್ಯಯ: ಯಾವ ಮಾರ್ಗದಲ್ಲಿ ಮೆಟ್ರೊ ಇಲ್ಲ ಇಲ್ಲಿದೆ ವಿವರ
ಭಾನುವಾರವೂ ಅನೇಕರ ವೀಕೆಂಡ್ ಸುತ್ತಾಡಕ್ಕಾಗಿ ಮೆಟ್ರೋ ಆಶ್ರಯಿಸುತ್ತಾರೆ. ಆದರೆ ಈ ಭಾನುವಾರ ಪರ್ಪಲ್ ಲೈನ್ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಟ್ರಿನಿಟಿ ಸರ್ಕಲ್ ಮತ್ತು ಹಲಸೂರು ನಡುವೆ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೆಟ್ರೋ ಈ ಮಾರ್ಗದಲ್ಲಿ ಇರಲ್ಲ.
ಭಾನುವಾರ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತವಾಗಲಿದೆ. ಆದರೆ ಬೈಯಪ್ಪನಹಳ್ಳಿಯಿಂದ ಕಾಡುಗೋಡಿಯವರೆಗೆ ಸಂಚರಿಸಬಹುದು. ಚಲ್ಲಘಟ್ಟದಿಂದ ಎಂಜಿ ರಸ್ತೆ ನಡುವಿನ ಸಂಚಾರ ಮಾತ್ರ ಸ್ಥಗಿತವಾಗಲಿದೆ.
9 ಗಂಟೆಯ ಬಳಿಕ ಎಂದಿನಂತೆ ಸಂಚಾರವಿರಲಿದೆ. ಇನ್ನು, ಇದು ಕೇವಲ ನೇರಳೆ ಮಾರ್ಗಕ್ಕೆ ಮಾತ್ರ ಸೀಮಿತವಾಗಿದೆ. ಹಸಿರು ಮಾರ್ಗದಲ್ಲಿ ಎಂದನಿಂತೆ ಬೆಳಿಗ್ಗೆಯಿಂದಲೇ ಮೆಟ್ರೋ ಸಂಚಾರವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.