ಪಿಯಾಗ್ಗಿಯೋ ಸಂಸ್ಥೆ, ಕೊನೆಗೂ ಗ್ರಾಹಕರ ಕೈಗೆಟುಕುವ ದರದಲ್ಲಿ ಎಪ್ರಿಲಿಯಾ ಎಸ್‌ಆರ್-150 ಮಾದರಿಯ ಬೈಕ್‌ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ದೆಹಲಿ ಶೋ ರೂಮ್ ದರ ಹೊರತು ಪಡಿಸಿ ಈ ಆವೃತ್ತಿಯ ಬೈಕ್‌ಗಳು 65 ಸಾವಿರ ರೂಪಾಯಿ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ.
ಇದರ ಬೆಲೆಯೇ ನಿರ್ಧರಿಸುವಂತೆ, ಈ ಆವೃತ್ತಿಯ ಬೈಕ್‌ಗಳು ವೆಸ್ಪಾ ಆವೃತ್ತಿಯ ಬೈಕ್‌ಗಳಿಗಿಂತ ಕೆಳ ಹಂತದ ಬೈಕ್ ಎಂದು ತಿಳಿದು ಬರುತ್ತಿದ್ದು, ಇವು ಹೋಂಡಾ ಆಕ್ಟಿವ್ 125 ಮತ್ತು ಹೊಸ ಆವೃತ್ತಿಯ ಎಕ್ಸ್‌ಸ್ 125 ರೇಂಜ್‌ನ ಬೈಕ್‌ಗಳು ಎಂದು ಹೇಳಲಾಗುತ್ತಿದೆ.