Arecanut Price today: ಅಡಿಕೆ ಇಂದಿನ ದರ, ಕಾಳುಮೆಣಸು ಇಂದಿನ ದರ, ಕ್ಯಾಂಪ್ಕೊ ಮಾರುಕಟ್ಟೆ ದರ
ಕಳೆದ ಕೆಲವು ದಿನಗಳಿಂದ ಅಡಿಕೆ, ಕಾಳುಮೆಣಸು ದರ ನಿಂತ ನೀರಾಗಿದೆ. ಬೆಲೆ ಏರಿಕೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಆದರೆ ಹಾಗಂತ ಕಡಿಮೆಯೂ ಆಗಿಲ್ಲ ಎನ್ನುವುದು ಗಮನಾರ್ಹ. ಇಂದಿನ ಮಾರುಕಟ್ಟೆ ದರ ಹೇಗಿದೆ ಇಲ್ಲಿದೆ ವಿವರ.
ಹೊಸ ಅಡಿಕೆಗೆ ನಿನ್ನೆ ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ.ಗೆ ಗರಿಷ್ಠ 400 ರೂ.ಗಳಷ್ಟಿತ್ತು. ಇದು ಇಂದೂ ಮುಂದುವರಿದಿದೆ. ಫ್ರೆಶ್ ಚೋಲ್ ಅಡಿಕೆಗೆ ಗರಿಷ್ಠ 455 ರಷ್ಟಿತ್ತು. ಅದೀಗ 460 ರೂ.ಗೆ ತಲುಪಿದೆ. ಡಬಲ್ ಚೋಲ್ ಅಡಿಕೆಗೆ 495 ರೂ.ಗಳಷ್ಟು ದರವಿತ್ತು. ಇಂದೂ ಅದೇ ದರ ಮುಂದುವರಿದಿದೆ. ಇಂದಿನ ಮಾರುಕಟ್ಟೆ ಪ್ರಕಾರ ಈ ದರಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.