ಬೆಳ್ತಂಗಡಿ: ಧರ್ಮಸ್ಥಳ ಸೌಜನ್ಯ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೌಜನ್ಯಗಳನ್ನು ರೇಪ್ ಮಾಡಿ ಕೊಲೆ ಮಾಡಿದವರು ಯಾರು ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಶಾಕಿಂಗ್ ವಿಚಾರ ಹೊರಹಾಕಿದ್ದು ದೂರನ್ನೂ ನೀಡಿದ್ದಾರೆ.
ಧರ್ಮಸ್ಥಳ ಸೌಜನ್ಯ ಕೇಸ್ 12 ವರ್ಷಗಳ ಹಿಂದೆ ನಡೆದಿದ್ದರೂ ಈಗಲೂ ಜೀವಂತವಾಗಿದೆ. ಪಿಯುಸಿ ಓದುತ್ತಿದ್ದ ಹುಡುಗಿಯನ್ನು ಧರ್ಮಸ್ಥಳಕ್ಕೆ ಸಂಬಂಧಪಟ್ಟವರೇ ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸುತ್ತಲೇ ಇದ್ದರು.
ಆದರೆ ಈಗ ಸ್ನೇಹಮಯಿ ಕೃಷ್ಣ ಶಾಕಿಂಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಸೌಜನ್ಯಳ ಮಾವ ವಿಠಲ ಗೌಡನೇ ಆಕೆಯನ್ನು ರೇಪ್ ಮಾಡಿ ಕೊಲೆ ಮಾಡಿದ್ದಾನೆ ಎಂದು ಶಾಕಿಂಗ್ ವಿಚಾರ ಹೇಳಿದ್ದಾರೆ. ಇದೀಗ ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನೇತ್ರಾವತಿ ಕಾಡಿನಿಂದ ಗಿರೀಶ್ ಮಟ್ಟೆಣ್ಣನವರ್ ಸೂಚನೆ ಮೇರೆಗೆ ನಾನೇ ಬುರುಡೆ ತಂದುಕೊಟ್ಟಿದ್ದೆ ಎಂದು ಆತ ಎಸ್ಐಟಿ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಇದರ ಬೆನ್ನಲ್ಲೇ ಸ್ನೇಹಮಯಿ ಕೃಷ್ಣ ಸ್ಪೋಟಕ ಆರೋಪ ಮಾಡಿದ್ದು ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಅರುಣ್ ಕುಮಾರ್ ಗೆ ದೂರು ನೀಡಿದ್ದಾರೆ. ವಿಠಲ ಗೌಡಗೆ ಮೊದಲಿನಿಂದಲೂ ಸೌಜನ್ಯ ಮೇಲೆ ಕಣ್ಣಿತ್ತು. ಆದರೆ ಆಕೆ ಒಪ್ಪಲಿಲ್ಲ. ಇದೇ ಕಾರಣಕ್ಕೆ ಆಕೆಯನ್ನು ಆತನೇ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಈ ಕೃತ್ಯಕ್ಕೆ ಆತ ಸಂತೋಷ್ ರಾವ್ ನೆರವು ಪಡೆದಿರಬಹುದು. ಮೊದಲು ಕುಸುಮಾವತಿಗೂ ವಿಠಲ ಗೌಡ ಮೇಲೆ ಅನುಮಾನವಿತ್ತು ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.