Arecanut price today: ಅಡಿಕೆ ಬೆಳೆಗಾರರಿಗೆ ಇಂದು ಬಂಪರ್, ಇಂದಿನ ಬೆಲೆ ಎಷ್ಟಾಗಿದೆ ನೋಡಿ

Krishnaveni K

ಬುಧವಾರ, 26 ಮಾರ್ಚ್ 2025 (12:00 IST)
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸ್ಥಿರವಾಗಿದ್ದ ಅಡಿಕೆ ಬೆಲೆ ಇಂದು ಏರಿಕೆಯಾಗಿದ್ದು ಅಡಿಕೆ ಬೆಳಗಾರರಿಗೆ ಇಂದು ನಿಜಕ್ಕೂ ಲಾಭದ ದಿನ. ಮಾರುಕಟ್ಟೆಯಲ್ಲಿ ಇಂದು ಅಡಿಕೆ, ಕಾಳುಮೆಣಸು ದರ ಎಷ್ಟಾಗಿದೆ ಇಲ್ಲಿದೆ ವಿವರ.

ಕಳೆದ ಒಂದು ವಾರದಿಂದ ಹೊಸ ಅಡಿಕೆ ಮತ್ತು ಹಳೆ ಅಡಿಕೆ ಬೆಲೆ ನಿಂತ ನೀರಾಗಿತ್ತು. ಇಂದು ಈ ಎರಡೂ ಅಡಿಕೆ ಬೆಲೆ ಕೊಂಚ ಏರಿಕೆಯಾಗಿದೆ. ಹೊಸ ಅಡಿಕೆ ಬೆಲೆ ಇಂದು 10 ರೂ. ಏರಿಕೆಯಾಗಿದ್ದು ಗರಿಷ್ಠ 420 ರೂ.ಗೆ ಬಂದು ತಲುಪಿದೆ. ಹಳೆ ಅಡಿಕೆ ದರದಲ್ಲಿ 5 ರೂ. ಏರಿಕೆಯಾಗಿದ್ದು 465 ರೂ. ಗೆ ಬಂದು ತಲುಪಿದೆ.

ಆದರೆ ನಿನ್ನೆ ಹೊಸ ಫಟೋರ ದರ 300 ರೂ.ಗಳಷ್ಟಿದ್ದರೆ, ಹಳೆ ಫಟೋರ 335 ರೂ. ಗೆ ಏರಿಕೆಯಾಗಿತ್ತು. ಇಂದೂ ಕೂಡಾ ಅದೇ ದರ ಮುಂದುವರಿದಿದೆ. ಹೊಸ ಉಳ್ಳಿ ದರ ಗರಿಷ್ಠ 160 ರೂ., ಹಳೆ ಉಳ್ಳಿ 180 ರೂ., ಹೊಸ ಕೋಕ 240 ರೂ., ಹಳೇ ಕೋಕ 250 ರೂ. ಗಳಷ್ಟಾಗಿದೆ.

ಕಾಳುಮೆಣಸು ದರ
ಕಾಳುಮೆಣಸಿನ ಬೆಲೆಯಲ್ಲೂ ಯಾವುದೇ ಹೆಚ್ಚು-ಕಡಿಮೆಯಾಗಿಲ್ಲ. ಕಳೆದ ಒಂದು ವಾರದಿಂದ ಯಥಾಸ್ಥಿತಿಯಲ್ಲಿದೆ. ಕಾಳುಮೆಣಸಿಗೆ ನಿನ್ನೆ ಗರಿಷ್ಠ 680 ರೂ.ಗಳಷ್ಟಿತ್ತು. ಕಳೆದ ಕೆಲವು ದಿನಗಳಿಂದ ಇದೇ ಬೆಲೆಯಿದೆ. ಇಂದು ಕೂಡಾ ಅದೇ ದರ ಮುಂದುವರಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ