Arecanut price today: ಅಡಿಕೆ ಬೆಳೆಗಾರರಿಗೆ ನಿರಾಸೆ, ಕೊಬ್ಬರಿ ಬೆಳೆಗಾರರಿಗೆ ಬಂಪರ್

Krishnaveni K

ಬುಧವಾರ, 11 ಜೂನ್ 2025 (12:40 IST)
ಬೆಂಗಳೂರು: ಕಳೆದ ಎರಡು ದಿನಗಳಿಂದ ಅಡಿಕೆ ಬೆಲೆ ನಿರಂತರ ಇಳಿಕೆಯಾಗುತ್ತಲೇ ಇದೆ. ಇದರಿಂದ ರೈತರ ಮೊಗದಲ್ಲಿ ಚಿಂತೆ ಮೂಡಿದೆ. ನಿನ್ನೆ ಯಥಾಸ್ಥಿತಿಯದ್ದ ಅಡಿಕೆ ಬೆಲೆ ಇಂದು ಮತ್ತೆ ಇಳಿಕೆಯಾಗಿದೆ. ಆದರೆ ಕೊಬ್ಬರಿ ಬೆಲೆ ಏರಿಕೆಯಾಗುತ್ತಿದ್ದು ಬೆಳೆಗಾರರಿಗೆ ಬಂಪರ್ ಆಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ.

ಈ ವಾರ ಆರಂಭದಲ್ಲೇ ಅಡಿಕೆ ಬೆಲೆ ಇಳಿಕೆಯಾಗುತ್ತಾ ಬಂದಿದೆ. ಬೆಳೆ ಕಡಿಮೆ ಜೊತೆಗೆ ಬೆಲೆಯೂ ಇಳಿಕೆಯಾಗಿರುವುದರಿಂದ ರೈತರಿಗೆ ನಿರಾಸೆಯಾಗಿದೆ. ಇಂದು ಹೊಸ ಅಡಿಕೆಗೆ ಇಳಿಕೆಯಾಗಿದ್ದರೆ  ಉಳಿದ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದೆ. ನಿನ್ನೆ ಹೊಸ ಅಡಿಕೆ ಬೆಲೆ  485 ರೂ.ಗಳಾಗಿತ್ತು. ಇಂದು10 ರೂ. ಇಳಿಕೆಯಾಗಿದ್ದು 475 ರೂ.ಗಳಾಗಿದೆ.  ಹಳೆ ಅಡಿಕೆ ಬೆಲೆಯೂ ಏರಿಕೆ-ಇಳಿಕೆಯಾಗದೇ ಗರಿಷ್ಠ 520 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 520 ರೂ.ಗಳಾಗಿವೆ.

ಹೊಸ ಪಟೋರ ಮತ್ತು ಹಳೆ ಪಟೋರ ದರ ಮೊನ್ನೆ ಇಳಿಕೆಯಾಗಿತ್ತು. ಇಂದು ಎರಡೂ ಏರಿಕೆಯೂ ಆಗಿಲ್ಲ, ಇಳಿಕೆಯೂ ಆಗಿಲ್ಲ. ಇಂದು ಹೊಸ ಪಟೋರ  ದರ 365 ರೂ.ಗಳಷ್ಟಿದೆ. ಹಳೆ ಫಟೋರ ದರ 365 ರೂ.ಗಳಷ್ಟೇ ಇದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 255 ರೂ.ಗಳಾಗಿವೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ ತಲಾ 315 ರೂ.ಆಗಿದೆ.
ಕಾಳುಮೆಣಸು ದರ
ಕಾಳುಮೆಣಸು ದರದಲ್ಲಿಏರಿಕೆಯಾಗದೇ ಇದ್ದರೂ ಇಳಿಕೆಯಾಗಿಲ್ಲ ಎನ್ನುವುದೇ ಸಮಾಧಾನಕರ ವಿಚಾರ. ಇಂದೂ 660 ರೂ.ಗಳಷ್ಟಿವೆ. ಇನ್ನು ಒಣಕೊಬ್ಬರಿ ಬೆಲೆ ಏರಿಕೆಯಾಗಿದ್ದು ಬೆಳೆಗಾರರಿಗೆ ಬಂಪರ್ ಆಗಿದೆ. ಇಂದು ಬರೋಬ್ಬರಿ 25 ರೂ. ಏರಿಕೆಯಾಗಿದ್ದು ಗರಿಷ್ಠ 225 ರೂ.ಗಳಷ್ಟಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ