Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ಇಂದು ನಿರಾಸೆ

Krishnaveni K

ಸೋಮವಾರ, 2 ಜೂನ್ 2025 (12:10 IST)
ಬೆಂಗಳೂರು: ಅಡಿಕೆ ಬೆಳೆಗಾರರು ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದರೆ ನಿರಾಸೆಯಾಗಲಿದೆ. ಇಂದೂ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕಳೆದ ವಾರಂತ್ಯದ ಬೆಲೆಯೇ ಮುಂದುವರಿದಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ.

ಕಳೆದ ವಾರ ಅಡಿಕೆ ಬೆಲೆ ಏರಿಕೆಯಾಗುತ್ತಿರುವುದು ಬೆಳೆಗಾರರಿಗೆ ಖುಷಿ ಮೂಡಿಸಿತ್ತು. ಆದರೆ ವಾರಂತ್ಯದಲ್ಲಿ ಈಗ ಅಡಿಕೆ ಬೆಲೆ ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ ಎನ್ನುವ ಸ್ಥಿತಿಯಾಗಿದೆ. ಇಂದು ವಾರದ ಆರಂಭದಲ್ಲೂ ಅದೇ ಬೆಲೆ ಮುಂದುವರಿದಿದೆ. ಇಂದು ಹೊಸ ಅಡಿಕೆ ಬೆಲೆ 495 ರೂ.ಗಳಷ್ಟೇ ಇದೆ.  ಹಳೆ ಅಡಿಕೆ ಬೆಲೆ ಯೂ ನಿನ್ನೆಯಷ್ಟೇ ಅಂದರೆ ಗರಿಷ್ಠ 520 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 520 ರೂ.ಗಳಾಗಿವೆ.

ಹೊಸ ಫಟೋರ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ 370 ರೂ.ಗಳಷ್ಟಿದೆ. ಹಳೆ ಫಟೋರ ದರ 375 ರೂ.ಗಳಷ್ಟೇ ಇದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಇಂದೂ ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 260 ರೂ.ಗಳಾಗಿವೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ ತಲಾ 315 ರೂ.ಆಗಿದೆ.
ಕಾಳುಮೆಣಸು ದರ
ಆದರೆ ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಕಾಳುಮೆಣಸು ಬೆಳೆಗಾರರಿಗೆ ಮಾತ್ರ ಮತ್ತೆ ನಿರಾಸೆಯಾಗಿದೆ. ಕಾಳುಮೆಣಸು ದರವೂ ಯಾವುದೇ ಏರಿಕೆ ಅಥವಾ ಇಳಿಕೆಯಾಗಿಲ್ಲ. ಇಂದು ಗರಿಷ್ಠ ದರ 650 ರೂ.ಗಳಾಗಿದೆ. ಇನ್ನು ಒಣಕೊಬ್ಬರಿ ಬೆಲೆ ಮಾತ್ರ ಕೆಲವು ದಿನಗಳ ನಂತರ ಏರಿಕೆಯಾಗಿತ್ತು. ಆದರೆ ಇಂದು ಯಥಾಸ್ಥಿತಿಯಲ್ಲಿದ್ದು ಗರಿಷ್ಠ 200 ರೂ.ಗಳಷ್ಟಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ