ಆನ್ ಲೈನ್ ಮೂಲಕ ಶಾಪಿಂಗ್ ಮಾಡುವ ಗ್ರಾಹಕರೇ ಹುಷಾರ್ !

ಶುಕ್ರವಾರ, 2 ನವೆಂಬರ್ 2018 (06:59 IST)
ಬೆಂಗಳೂರು : ಶಾಪಿಂಗ್ ಆ್ಯಪ್ ಗಳ ನಕಲಿ ಆ್ಯಪ್ ಗಳನ್ನು ಬಳಸಿ ಜನರಿಗೆ ಮೋಸ ಮಾಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.


ಹೌದು. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಆನ್ ಲೈನ್ ಮೂಲಕ ಶಾಪಿಂಗ್ ಮಾಡುತ್ತಿದ್ದು, ಇದನ್ನೇ ಬಂಡವಾಳವಾಗಿಸಿಕೊಂಡ ಹನುಮಂತನಗರ ನಿವಾಸಿಗಳಾದ ಭಾಗ್ಯಾ, ತೇಜಸ್ವಿನಿ, ಪುನೀತ್​ ಎಂಬುವರು ಮಿಂಥ್ರಾ,‌ ಲೈಮ್ ರೋಡ್, ಆಮೆಜಾನ್ ಶಾಪಿಂಗ್ ಆ್ಯಪ್​ಗಳ ನಕಲಿ ಆ್ಯಪ್ ಬಳಸಿ ಜನರನ್ನು ತಮ್ಮತ್ತ ಸೆಳೆದು ಮೋಸ ಮಾಡಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.


ಇವರು ನೂರಾರು ಜನರಿಗೆ ಪಂಗ ನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ