ಡೊಮಿನೋರ್ 400 ಬೈಕಿನಲ್ಲಿ 373 ಸಿಸಿ ಇಂಜಿನ್ ಇದ್ದು, ಎಬಿಎಸ್, ಡಿಸ್ಕ್ ಬ್ರೇಕ್ ಹೊಂದಿರುವ ಎರಡು ಆವೃತ್ತಿಗಳ ಬೆಲೆ ಕ್ರಮವಾಗಿ ರೂ. 1.5 ಲಕ್ಷ ಮತ್ತು ರೂ.1.3 ಲಕ್ಷಗಳು. "ನಮ್ಮ ಕಂಪನಿಯಿಂದ ಬಂದಂತ ಅತ್ಯುತ್ತಮ, ಅತಿದೊಡ್ಡ ಬೈಕ್ ಡೊಮಿನೋರ್. ಈ ಬೈಕ್ ಮೂಲಕ ರೂ. 1-2 ಲಕ್ಷಗಳ ಸೆಗ್ಮೆಂಟ್ಗೆ ಪ್ರವೇಶಿಸುತ್ತಿದ್ದೇವೆ. ಈ ವಿಭಾಗದಲ್ಲಿ ರಾಯಲ್ ಎನ್ಫೀಲ್ಡ್ ಪಾಲು ಶೇ. 80ರಷ್ಟಿದೆ" ಎಂದು ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಈ ವಿಭಾಗದಲ್ಲಿನ ಶೇ. 80 ಮಾರುಕಟ್ಟೆ ಪಾಲನ್ನು ಮುಂಬರುವ 12-18 ತಿಂಗಳಲ್ಲಿ ಪಡಯಬೇಕೆಂದಿದ್ದೇವೆ. ಆಗ 100 ಕೋಟಿ ಡಾಲರ್ ಬ್ರಾಂಡ್ ಆಗಿ ಡೊಮಿನೋರ್ 400 ಹೊರಹೊಮ್ಮಲಿದೆ. ಈ ವಿಭಾಗದಲ್ಲಿರುವ ರಾಯಲ್ ಎನ್ಫೀಲ್ಡ್ ಕಂಪನಿ ತಿಂಗಳಿಗೆ 65,00-75,00 ಬೈಕ್ಗಳನ್ನು ಮಾರಾಟ ಮಾಡುತ್ತಿದೆ ಎಂದರು. ಮುಂದಿನ ವರ್ಷ ಈ ಬೈಕನ್ನು ವಿದೇಶಗಳಿಗೂ ರಫ್ತು ಮಾಡಲಿದ್ದೇವೆ. ಡೊಮಿನೋರ್ ಬುಕಿಂಗ್ ಆನ್ಲೈನಲ್ಲಿ ಆರಂಭಿಸಿದ್ದು, ಜನವರಿಯಿಂದ ಡೆಲಿವರಿ ಎಂದಿದ್ದಾರೆ.