ಬಿಎಸ್‌ಎನ್‌ಎಲ್‌ ಮೊಬೈಲ್ ಸಂಪರ್ಕದಲ್ಲಿ ಹೆಚ್ಚಳ

ಶುಕ್ರವಾರ, 6 ಮೇ 2016 (15:27 IST)
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆ, ಪ್ರಸಕ್ತ ಸಾಲಿನ ಫೆಬ್ರುವರಿ ತಿಂಗಳಲ್ಲಿ ಹೊಸ ವೈಯರ್‌ಲೆಸ್ ಸಂಪರ್ಕ ನೀಡುವಲ್ಲಿ 1.67 ಪ್ರತಿಶತ ಹೆಚ್ಚಳ ಕಂಡಿದ್ದು, ಖಾಸಗಿ ಮೊಬೈಲ್‌ ಸಂಸ್ಥೆಗಳನ್ನು ಹಿಂದೆ ಹಾಕಿದೆ. 
ಬಿಎಸ್‌ಎನ್‌ಎಲ್‌ 1.67 ಪ್ರತಿಶತ ಅಭಿವೃದ್ಧಿಯಾಗಿದ್ದು, ಭಾರತೀಯ ಏರ್‌ಟೆಲ್ 1.18 ಪ್ರತಿಶತ, ವೊಡಾಫೋನ್ 1.04 ಪ್ರತಿಶತ ಮತ್ತು ಐಡಿಯಾ ಸೆಲ್ಯುಲರ್ 0.85 ಪ್ರತಿಶತ ಅಭಿವೃದ್ಧಿ ಕಂಡಿದೆ.
 
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ 13.93 ಲಕ್ಷ ಚಂದಾದಾರರನ್ನು ಸೇರಿಸಿಕೊಳ್ಳುವ ಮೂಲಕ 8.48 ಕೋಟಿ ಚಂದಾದಾರರ ನೆಲೆಯನ್ನು ಹೊಂದಿದೆ.
 
ಭಾರತೀಯ ಏರ್‌ಟೆಲ್ 29 ಲಕ್ಷ ಚಂದಾದಾರರನ್ನು ಸೇರಿಸಿಕೊಳ್ಳುವ ಮೂಲಕ 24.86 ಕೋಟಿ ಚಂದಾದಾರರ ನೆಲೆಯನ್ನು ಹೊಂದಿದ್ದು, ವೊಡಾಫೋನ್ 20.34 ಲಕ್ಷ ಚಂದಾದಾರರನ್ನು ಸೇರಿಸಿಕೊಳ್ಳುವ ಮೂಲಕ 19.67 ಕೋಟಿ ಚಂದಾದಾರರ ನೆಲೆಯನ್ನು ಹೊಂದಿದ್ದು, 
 
ಐಡಿಯಾ ಸೆಲ್ಯುಲರ್ 14.63 ಲಕ್ಷ ಚಂದಾದಾರರನ್ನು ಸೇರಿಸಿಕೊಳ್ಳುವ ಮೂಲಕ 17.46 ಕೋಟಿ ಚಂದಾದಾರರ ನೆಲೆಯನ್ನು ಹೊಂದಿದ್ದು, ರಿಲಯನ್ಸ್ ಕಮ್ಯೂನಿಕೇಶನ್ಸ್ 6.99 ಲಕ್ಷ ಚಂದಾದಾರರನ್ನು ಸೇರಿಸಿಕೊಳ್ಳುವ ಮೂಲಕ 10.19 ಕೋಟಿ ಚಂದಾದಾರರ ನೆಲೆಯನ್ನು ಹೊಂದಿದ್ದು, 

ವೆಬ್ದುನಿಯಾವನ್ನು ಓದಿ