ಬಿಎಸ್‌ಎನ್ಎಲ್ ಲಾಭದಲ್ಲಿ ಭಾರಿ ಏರಿಕೆ

ಸೋಮವಾರ, 30 ಜನವರಿ 2017 (14:18 IST)
ಈ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕದ ಅಂಕಿಅಂಶವನ್ನು ಬಿಎಸ್‌ಎನ್‌ಎಲ್ ಬಿಡುಗಡೆ ಮಾಡಿದ್ದು, ನಷ್ಟ ಕಡಿಮೆಯಾಗಿರುವುದು ಕಂಡುಬಂದಿದೆ. ಹಿಂದಿನ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ರು. 6,121 ಕೋಟಿಯಿದ್ದ ನಷ್ಟ ರು. 4890 ಕೋಟಿಗೆ ಇಳಿದಿದೆ. ಹಿಂದಿನ ವರ್ಷದಲ್ಲಿ ರು. 18,314.9 ಕೋಟಿಯಿದ್ದ ಸೇವೆಯಿಂದ ಗಳಿಸಲಾದ ಆದಾಯವು ಶೇ. 5.8ರಷ್ಟು ಹೆಚ್ಚಾಾಗಿದ್ದು, ರು. 19,379.6 ಕೋಟಿ ತಲುಪಿದೆ. ಇತರೆ ಆದಾಯದಲ್ಲಿ ಶೇ. 42ರಷ್ಟು ಏರಿಕೆಯಾಗಿದೆ. ರು. 20,290 ಕೋಟಿಯಿದ್ದ ಒಟ್ಟು ಆದಾಯ ಶೇ. 7ರಷ್ಟು ಹೆಚ್ಚಾಗಿದ್ದು ರು. 18,954 ಕೋಟಿಗೆ ತಲುಪಿದೆ. 
 
ಮಾಹಿತಿ ಬಿಡುಗಡೆ ಮಾಡಿದ ಬಿಎಸ್‌ಎನ್‌ಎಲ್ ಮುಖ್ಯಸ್ಥ ಅನುಮಪ್ ಶ್ರೀವಾಸ್ತವ ಅವರು, ‘ಕಳೆದ ವರ್ಷಕ್ಕಿಿಂತ ಈ ವರ್ಷದ ಮೂರು ತ್ರೈಮಾಸಿಕದಲ್ಲಿ ನಷ್ಟ ಕಡಿಮೆಯಾಗಿದೆ. ನಾಲ್ಕನೇ ವರ್ಷದಲ್ಲಿ ಆದಾಯ ಹೆಚ್ಚಾಾಗುವ ನಿರೀಕ್ಷೆೆಯಿದ್ದು, ನಷ್ಟ ಇನ್ನಷ್ಟು ಕಡಿಮೆಯಾಗಲಿದೆ’ ಎಂದು ತಿಳಿಸಿದ್ದಾಾರೆ. 
 
ಸಾರ್ವಜನಿಕ ವಲಯದ ದೂರಸಂಪರ್ಕ ಕಂಪೆನಿಗಳು 2013-14ರಲ್ಲಿ ರು. 7,019 ಕೋಟಿ ನಷ್ಟದಲ್ಲಿದ್ದವು. ಹಾಗೆಯೇ 2014-15ರಲ್ಲಿ ನಷ್ಟವು ರು. 8234 ಕೋಟಿಗೆ ಇಳಿದಿತ್ತು. ಇನ್ನು 2015-16ರಲ್ಲಿ ನಷ್ಟವು ರು. 3,880 ಕೋಟಿಗೆ ಇಳೀದಿತ್ತು. ಈ ಹಣಕಾಸು ವರ್ಷದಲ್ಲಿ ನಷ್ಟ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂಬ ನಿರೀಕ್ಷೆೆಯಲ್ಲಿ  ದೂರಸಂಪರ್ಕ ಕಂಪೆನಿಗಳಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ