ಬಿಎಸ್ಎನ್ಎಲ್‍ನಿಂದ ಮೂರು ಹೊಸ ಆಫರ್‌ಗಳು

ಬುಧವಾರ, 25 ಜನವರಿ 2017 (11:08 IST)
ಖಾಸಗಿ ದೂರಸಂಪರ್ಕ ಕಂಪೆನಿಗಳಿಂದ ಎದುರಾಗುತ್ತಿರುವ ಸ್ಪರ್ಧೆಯನ್ನು ತಡೆದುಕೊಳ್ಳಲು ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಹೊಸ ಆಫರ್‌ಗಳನ್ನು ಪ್ರಕಟಿಸಿದೆ. ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಪ್ರೀಪೇಯ್ಡ್ ಗ್ರಾಹಕರಿಗೆ ಮೂರು ಆಫರ್‌ಗಳನ್ನು ಪರಿಚಯಿಸುತ್ತಿದೆ.
 
ರೂ.26ಕ್ಕೆ ರೀಚಾರ್ಜ್ ಮಾಡಿಕೊಳ್ಳುವ ಮೂಲಕ ಬಿಎಸ್ಎನ್ಎಲ್ ವ್ಯಾಪ್ತಿಯಲ್ಲಿ 26 ಗಂಟೆಗಳ ಕಾಲ ಅನಿಯಮಿತ ಕರೆಗಳನ್ನು ಮಾಡಬಹುದು. ಈ ಆಫರ್ ಜನವರಿ 26ರಿಂದ 31ರವೆಗೂ ಇರುತ್ತದೆ. ಇನ್ನು ಉಳಿದ ಎರಡು ಆಫರ್‌ಗಳ ಮೇಲೆ ಹೆಚ್ಚಿನ ಮೊತ್ತದ ಟಾಕ್‌ಟೈಂ ನೀಡುತ್ತಿರುವುದಾಗಿ ಬಿಎಸ್ಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಅನುಪಮ್ ಶ್ರೀವಾಸ್ತವ್ ತಿಳಿಸಿದ್ದಾರೆ.
 
ಕಾಂಬೋ 2601 ಹೆಸರಿನ ಆಫರ್‌ ಪ್ರಕಾರ ರೂ.2600ಕ್ಕೆ ರೀಚಾರ್ಜ್ ಮಾಡಿಕೊಂಡರೆ ರೂ.1300 ಹೆಚ್ಚುವರಿ ಟಾಕ್‌ಟೈಮ್ ಪಡೆದುಕೊಳ್ಳಬಹುದು. ರೂ.2600 ಮುಖ್ಯ ಬ್ಯಾಲೆನ್ಸ್‍ನಲ್ಲಿ ಜಮೆ ಮಾಡಲಿದ್ದಾರೆ. ಹೆಚ್ಚುವರಿ ಟಾಕ್‌ಟೈಮ್ ಸೆಕೆಂಡರಿ ಖಾತೆಯಡಿ ಜಮೆ ಮಾಡಲಿದ್ದಾರೆ. ಇದನ್ನು ಮೂರು ತಿಂಗಳಲ್ಲಿ ಬಳಸಿಕೊಳ್ಳಬೇಕಾಗುತ್ತದೆ.
 
ಕಾಂಬೋ 6801 ಹೆಸರಿನ ಆಫರ್‌ನಲ್ಲಿ ರೂ.6800 ರೀಚಾರ್ಜ್ ಮಾಡಿಕೊಂಡರೆ ಅಷ್ಟೇ ಮೊತ್ತದ ಮುಖ್ಯ ಬ್ಯಾಲೆನ್ಸ್‌ನಡಿ, ಹೆಚ್ಚುವರಿಯಾಗಿ ರೂ.6800 ಸೆಕೆಂಡರಿ ಅಕೌಂಟ್‌ನಲ್ಲಿ ಜಮೆಯಾಗಲಿದೆ. ಇದನ್ನೂ ಅಷ್ಟೇ ಮೂರು ತಿಂಗಳಲ್ಲಿ ಬಳಸಿಕೊಳ್ಳಬೇಕು. ಆದರೆ ಮೇನ್ ಬ್ಯಾಲೆನ್ಸ್ ಬಳಕೆಗೆ ಕಾಲಮಿತಿ ಇಲ್ಲ. ಈ ಎರಡು ಆಫರ್‌ಗಳು ಮಾರ್ಚ್ 31ರವರೆಗೂ ಲಭ್ಯವಾಗಲಿವೆ ಎಂದು ಶ್ರೀವಾಸ್ತವ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ