ಬಿ.ಎಸ್.ಎನ್.ಎಲ್ ನ ಧನಲಕ್ಷ್ಮಿ ಯೋಜನೆಯಡಿ ಗ್ರಾಹಕರಿಗೊಂದು ಬಂಪರ್ ಆಫರ್
ಶುಕ್ರವಾರ, 26 ಅಕ್ಟೋಬರ್ 2018 (13:43 IST)
ನವದೆಹಲಿ : ಬಿ.ಎಸ್.ಎನ್.ಎಲ್ ಗ್ರಾಹಕರಿಗೊಂದು ಸಿಹಿಸುದ್ದಿ. ಧನಲಕ್ಷ್ಮಿ ಯೋಜನೆಯಡಿ ತನ್ನ ಗ್ರಾಹಕರಿಗೆ ರಿಯಾಯಿತಿ ಕೊಡುಗೆಯನ್ನು ಬಿ.ಎಸ್.ಎನ್.ಎಲ್ ಘೋಷಿಸಿದೆ.
ಈ ಮೂಲಕ ಪ್ರಸ್ತುತ ಬಿಲ್ ಪಾವತಿಸುವ ಅಥವಾ ಒಂದೇ ತಿಂಗಳು ಬಾಕಿ ಉಳಿದ ಎಲ್ಲಾ ಸೇವೆಗಳ ಬಿಲ್ ಪಾವತಿಸುವ ಗ್ರಾಹಕರಿಗೆ ಶೇ 1 ರಷ್ಟು (ಜಿ.ಎಸ್.ಟಿ ಹೊರತುಪಡಿಸಿ) ರಿಯಾಯಿತಿ ಸಿಗಲಿದ್ದು, ಆಯುಧಪೂಜೆಯಿಂದ ದೀಪಾವಳಿ ತನಕ ಈ ಯೋಜನೆಯ ಲಾಭ ಪಡೆಯಬಹುದು ಎಂದು ಬಿ.ಎಸ್.ಎನ್.ಎಲ್ ತಿಳಿಸಿದೆ.
ಅಕ್ಟೋಬರ್ 18 ರಿಂದ ನವೆಂಬರ್ 7ರೊಳಗಿನ ಬಿಲ್ ಪಾವತಿಸುವ ವಾಣಿಜ್ಯ ಗ್ರಾಹಕರಿಗೆ ಶೇ.2 ಹಾಗು 5 ತಿಂಗಳುಗಳ ಬಿಲ್ ಮುಂಚಿತವಾಗಿ ಪಾವತಿಸುವ ಗ್ರಾಹಕರಿಗೆ ಶೇ.3 ರಷ್ಟು ರಿಯಾಯಿತಿ ಸಿಗಲಿದೆ ಎಂದು ಬಿ.ಎಸ್.ಎನ್.ಎಲ್ ಸಹಾಯಕ ಮುಖ್ಯ ವ್ಯವಸ್ಥಾಪಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ