Central Budget 2025 preview: ಬಜೆಟ್ ಬಳಿಕ ಈ ವಸ್ತುಗಳಿಗೆ ಏರಿಕೆಯಾಗುವ ಸಾಧ್ಯತೆ

Krishnaveni K

ಶುಕ್ರವಾರ, 31 ಜನವರಿ 2025 (16:21 IST)
ನವದೆಹಲಿ: ನಾಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2025 ರನ್ನು ಮಂಡಿಸಲಿದ್ದಾರೆ. ಬಜೆಟ್ ಬಳಿಕ ಯಾವುದೆಲ್ಲಾ ವಸ್ತುಗಳ ಬೆಲೆ ಏರಿಕೆಯಾಗಬಹುದು ಇಲ್ಲಿದೆ ವಿವರ.

ಈ ಬಾರಿ ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತಹ ಬಜೆಟ್ ಮಂಡನೆಯಾಗಲಿದೆ ಎಂಬ ನಿರೀಕ್ಷೆಯಿದೆ. ಆದರೆ ಬಜೆಟ್ ಬಳಿಕ ಕೆಲವೊಂದು ಐಷಾರಾಮಿ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಂತಹ ವಸ್ತುಗಳು ಯಾವುವು ಇಲ್ಲಿ ನೋಡಿ.

ಇವುಗಳಿಗೆ ಏರಿಕೆ ಸಾಧ್ಯತೆ
ಐಷಾರಾಮಿ ಸರಕಗಳು, ಉನ್ನತ ಮಟ್ಟದ ಇಲೆಕ್ಟ್ರಾನಿಕ್ ವಸ್ತುಗಳು, ಪ್ರೀಮಿಯಂ ಉತ್ಪನ್ನಗಳ ಮೇಲಿನ ಜಿಎಸ್ ಟಿ ಏರಿಕೆಯಾಗಬಹುದು.

ಆಮದು ಮಾಡಿದ ದುಬಾರಿ ಆಟೋ ಮೊಬೈಲ್ ವಸ್ತುಗಳು, ಕಾರುಗಳ ಮೇಲೆ ಕಸ್ಟಮ್ಸ್ ಸುಂಕ ಹೆಚ್ಚಾಗಬಹುದು.

ತಂಬಾಕು ಮತ್ತು ಸಿಗರೇಟುಗಳ ಮೇಲಿನ ತೆರಿಗೆ ಹೆಚ್ಚಳ ಸಾಧ್ಯತೆಯಿದೆ.

ಚಿನ್ನ ಮತ್ತು ಬೆಳ್ಳಿ, ಬೆಲೆ ಬಾಳುವ ಲೋಹದ ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಾಗಬಹುದು.

ವಿಮಾನ ಪ್ರಯಾಣ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ.  ವಿಮಾನ ಇಂಧನ ತೆರಿಗೆ ಹೆಚ್ಚಳವಾಗಬಹುದು. ಪರಿಣಾಮ ಟಿಕೆಟ್ ದರ ಹೆಚ್ಚಳವಾಗಬಹುದು.

ಮೊಬೈಲ್ ರಿಚಾರ್ಜ್ ಪ್ಲ್ಯಾನ್, ಇಂಟರ್ನೆಟ್ ಸೇವೆಗಳು ದುಬಾರಿಯಾಗುವ ಸಾಧ್ಯತೆಯಿದೆ.

ನಾಳೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದು ಅದಾದ ಬಳಿಕ ಯಾವ ವಸ್ತುಗಳ ಬೆಲೆ ಏರಿಕೆಯಾಗಲಿದೆ ಎಂಬ ಸ್ಪಷ್ಟ ಚಿತ್ರಣ ದೊರೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ