Central Budget 2025: ನಾಳೆ ಷೇರು ಮಾರುಕಟ್ಟೆ ತೆರೆದಿರುತ್ತಾ, ಇಲ್ಲಿದೆ ಉತ್ತರ
ಕೇಂದ್ರ ಬಜೆಟ್ ನಲ್ಲಿ ಈ ಬಾರಿ ಮಧ್ಯಮ ವರ್ಗದ ಜನರಿಗೆ ಸಾಕಷ್ಟು ನಿರೀಕ್ಷೆಗಳಿವೆ. ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ಮಧ್ಯಮ ವರ್ಗದವರ ಜೀವನ ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬಹುದು ಎಂದು ನಿರೀಕ್ಷೆಯಿಟ್ಟಿದ್ದಾರೆ.
ಈ ನಡುವೆ ಎಲೆಕ್ಟ್ರಾನಿಕ್ ಉತ್ಪನ್ನಗಳು, ಪರಿಸರ ಸ್ನೇಹಿ ಉತ್ಪನ್ನಗಳು, ಸ್ವದೇಶೀ ನಿರ್ಮಿತ ವಸ್ತುಗಳ ಮೇಲಿನ ತೆರಿಗೆ ಕಡಿತ ಮಾಡಿ ಅವುಗಳಿಗೆ ಪ್ರೋತ್ಸಾಹ ನೀಡಬಹುದು ಎಂಬ ನಿರೀಕ್ಷೆಯಿದೆ. ಹೀಗಾಗಿ ನಾಳೆ ಷೇರು ವಹಿವಾಟು ನಡೆಸುವವರೂ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದಾರೆ.
ನಾಳೆ ಷೇರು ಮಾರುಕಟ್ಟೆ ಬಜೆಟ್ ಕಾರಣಕ್ಕೆ ತೆರೆದಿರುತ್ತದೆ. ಬಿಎಸ್ಇ ಮತ್ತು ಎನ್ಎಸ್ಇ ಫೆಬ್ರವರಿ 1 ರಂದು ಓಪನ್ ಆಗಿರಲಿದೆ ಎಂದು ಈಗಾಗಲೇ ಪ್ರಕಟಣೆ ನೀಡಿದೆ. ಬಜೆಟ್ ಮಂಡನೆಯಿರುವ ಕಾರಣಕ್ಕೆ ನಾಳೆ ಲೈವ್ ಟ್ರೇಡಿಂಗ್ ಸೆಷನ್ ನಡೆಯಲಿದೆ ಎಂದು ಪ್ರಕಟಿಸಿದೆ.