ಸೇವಾ ತೆರಿಗೆ ಜಾರಿ: ಇಂದಿನಿಂದ ಯಾವ ಯಾವ ಉತ್ಪನ್ನಗಳು ದುಬಾರಿ ಗೊತ್ತಾ?

ಬುಧವಾರ, 1 ಜೂನ್ 2016 (18:50 IST)
ಕೇಂದ್ರ ಬಜೆಟ್‍ನಲ್ಲಿ ಘೋಷಿಸಿರುವಂತೆ ಇಂದಿನಿಂದ ಸೇವಾ ತೆರಿಗೆ ಜಾರಿ ಬರುತ್ತಿರುವ ಹಿನ್ನೆಲೆಯಲ್ಲಿ ಕಾರ್, ಸಿಗರೇಟ್ ಮತ್ತು ವಿಮಾನ ಪ್ರಯಾಣ ಗ್ರಾಹಕರಿಗೆ ದುಬಾರಿಯಾಗಲಿದೆ.
 
ಇಂದಿನಿಂದ 0.5 ಪ್ರತಿಶತ ಕೃಷಿ ಕಲ್ಯಾಣ ತೆರಿಗೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಒಟ್ಟು ಸೇವಾ ತೆರಿಗೆ 15 ಪ್ರತಿಶತ ಹೆಚ್ಚಳವಾಗುತ್ತಿದ್ದು, ಹೋಟೆಲ್ ಊಟ, ಪೋನ್ ಬಳಕೆ ಮತ್ತು ವಾಯು ವಿಹಾರ ಮತ್ತು ರೈಲ್ವೆ ಸೇವೆಗಳು ದುಬಾರಿಯಾಗುತ್ತಿದೆ.
 
ಇಂದಿನಿಂದ ದುಬಾರಿಯಾಗುತ್ತಿರುವ ವಸ್ತುಗಳು
 
1. ಕಾರುಗಳು
 
2. ಸಿಗರೇಟ್
 
3. ಸಿಗಾರ್
 
4. ತಂಬಾಕು ಪದಾರ್ಥ
 
5. ಸೇವಾ ತೆರಿಗೆಗಳಾದ ಬಿಲ್ ಪಾವತಿ, ಹೊಟೇಲ್ ಊಟ ಮತ್ತು ವಿಮಾನ ಪ್ರಯಾಣ
 
6. 1000 ರೂಪಾಯಿಗಿಂತ ಹೆಚ್ಚು ಬೆಲೆಯ ಸಿದ್ಧ ಉಡುಪು ಮತ್ತು ಬ್ರ್ಯಾಂಡೆಡ್ ಉಡುಪು
 
7. ಚಿನ್ನ ಮತ್ತು ಬೆಳ್ಳಿ: ಬೆಳ್ಳಿ ಹೊರತುಪಡಿಸಿ ಆಭರಣ ಲೇಖನಗಳು
 
8. ಖನಿಜ ಜಲ ಸೇರಿದಂತೆ ನೀರು, 
 
9. ಎರಡು ಲಕ್ಷ ಮೇಲ್ಪಟ್ಟ ಸರಕು ಮತ್ತು ಸೇವೆ
 
10. ಅಲ್ಯೂಮಿನಿಯಂ ಹಾಳೆ
 
11. ವಾಯುಯಾನ
 
12. ಪ್ಲಾಸ್ಟಿಕ್ ಚೀಲಗಳು ಮತ್ತು ಮೂಟೆ
 
13. ಕೇಬಲ್ ಕಾರು ಸವಾರಿ
 
14. ಆಮದು ಕೃತಕ ಆಭರಣಗಳ ಆಮದು
 
15. ಕೈಗಾರಿಕಾ ಸೋಲಾರ್ ವಾಟರ್ ಹೀಟರ್
 
16. ಕಾನೂನು ಸೇವೆಗಳು
 
17. ಲಾಟರಿ ಟಿಕೆಟ್
 
18 ಬಾಡಿಗೆ ವಾಹನ ಪ್ರಯಾಣ
 
19. ರಿಪೇರಿ ಹಾಗೂ ಸಾಗಣೆ 
 
20. ಇ-ಓದುವ ಸಾಧನಗಳು
 
21. ವಿಓಐಪಿ ಉಪಕರಣಗಳು
 
22. ಗಾಲ್ಫ್ ಕಾರುಗಳ ಆಮದು 
 
23. ಚಿನ್ನದ ಬಾರ್‌ಗಳು

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ