ಅದಾನಿ ಕೇಸ್ ತನಿಖೆ 3 ತಿಂಗಳಲ್ಲಿ ಪೂರ್ಣಗೊಳಿಸಿ-ಸುಪ್ರೀಂ ಕೋರ್ಟ್
ಉದ್ಯಮಿ ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ಹಿಂಡನ್ ಬರ್ಗ್ ರೀಸರ್ಚ್ ಸಂಸ್ಥೆ ಮಾಡಿರುವ ಹಣಕಾಸು ಅಕ್ರಮಗಳ ಆರೋಪಗಳ ವಿಚಾರಣೆ ಮಾಡಿದ ಸುಪ್ರೀಂಕೋರ್ಟ್, ಸೆಬಿ ತನಿಖೆಯನ್ನು ಎತ್ತಿ ಹಿಡಿದಿದೆ. ಅಲ್ಲದೆ, ಬಾಕಿ ಉಳಿದಿರುವ ಎರಡು ಪ್ರಕರಣಗಳ ತನಿಖೆಯನ್ನು 3 ತಿಂಗಳೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಸೆಬಿಗೆ ನಿರ್ದೇಶನವನ್ನ ನೀಡಿದ್ದು, ಸೆಬಿ ತನಿಖೆಯನ್ನು ಸಿಬಿಐಗೆ ವರ್ಗಾವಣೆ ಮಾಡಲ್ಲ. ಎಂದು ಸುಪ್ರೀಂ ಹೇಳಿದೆ.