ಜನತೆಗೆ ಸಂತಸದ ಸುದ್ದಿ: ಹಳೆಯ ನೋಟುಗಳನ್ನು ಮತ್ತೆ ಸ್ವೀಕರಿಸಲು ಆರ್‌ಬಿಐ ನಿರ್ಧಾರ

ಗುರುವಾರ, 26 ಜನವರಿ 2017 (16:00 IST)
ಹಳೆಯ 1000 ಮತ್ತು 500 ರೂ ನೋಟುಗಳನ್ನು ಹೊಂದಿರುವ ಜನತೆಗೆ ಸಂತಸದ ಸುದ್ದಿಯೊಂದು ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಬ್ಯಾಂಕ್‌ಗಳಲ್ಲಿ ಹಳೆಯ ನೋಟುಗಳನ್ನು ಜಮಾ ಮಾಡುವ ಅವಕಾಶ ನೀಡಲು ನಿರ್ಧರಿಸಿದೆ.
 
ಆರ್‌ಬಿಐ ಬ್ಯಾಂಕ್ ಸೀಮಿತ ಅವಧಿಗೆ ಮತ್ತೊಮ್ಮೆ 1000 ಮತ್ತು 500 ರೂ ಹಳೆಯ ನೋಟುಗಳನ್ನು ಬದಲಿಸಲು ಅವಕಾಶ ನೀಡಲು ಚಿಂತನೆ ನಡೆಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. 
 
ಆದರೆ, ಆರ್‌ಬಿಐ ನೀಡಿದ ಅವಕಾಶವನ್ನು ಕೆಲವರು ದುರುಪಯೋಗಪಡಿಸಿಕೊಳ್ಳದಿರಲು ಗ್ರಾಹಕರು ಕೇವಲ 2000 ರೂಪಾಯಿಗಳವರೆಗೆ ಮಾತ್ರ ಹಳೆಯ ನೋಟುಗಳನ್ನು ಬದಲಿಸಲು ಅವಕಾಶ ನೀಡಲು ಚಿಂತನೆ ನಡೆಸಿದೆ. 
 
ಪ್ರಧಾನಮಂತ್ರಿ ನರೇಂದ್ರ ಮೋದಿಯ ನೋಟ್ ಬ್ಯಾನ್‌ನಲ್ಲಿ ನೀಡಿದ 50 ದಿನಗಳ ಗಡುವು ಡಿಸೆಂಬರ್ 31 ಕ್ಕೆ ಅಂತ್ಯಗೊಂಡಿತ್ತು.
 
ನೋಟ್ ಬ್ಯಾನ್ ಸಂದರ್ಭದಲ್ಲಿ ವಿದೇಶಕ್ಕೆ ತೆರಳಿದವರು ಮಾತ್ರ ಸೂಕ್ತ ದಾಖಲೆಗಳನ್ನು ನೀಡಿ ಮಾರ್ಚ್ 31 ರವರೆಗೆ ತಮ್ಮ ಹಳೆಯ ನೋಟುಗಳನ್ನು ಬದಲಿಸಿಕೊಳ್ಳಬಹುದಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
 
ಪ್ರಧಾನಿ ಮೋದಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ನವೆಂಬರ್ 8 ರಂದು 1000 ಮತ್ತು 500 ರೂ.ನೋಟುಗಳನ್ನು ಅಮಾನ್ಯ ಮಾಡಿ ಘೋಷಣೆ ಹೊರಡಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ