ಬ್ಯಾಂಕ್ ಕೆಲಸಗಳಿದ್ದರೆ ಇಂದೇ ಮಾಡಿಕೊಳ್ಳಿ!
ನಾಳೆ ಅಂದರೆ ಜನವರಿ 25 ರಂದು ಕರ್ನಾಟಕ ಬಂದ್ ಇರುವುದರಿಂದ ಬಹುತೇಕ ಬ್ಯಾಂಕ್ ಗಳು ಕಾರ್ಯನಿರ್ವಹಣೆ ಮಾಡುವುದು ಅನುಮಾನ. ಒಂದು ವೇಳೆ ತೆರೆದರೂ ಸಿಬ್ಬಂದಿ ಕೊರತೆಯಿಂದ ವ್ಯವಹಾರ ಕಷ್ಟವಾಗಬಹುದು.
ಜನವರಿ 26 ಅಂದರೆ ಶುಕ್ರವಾರ ಗಣರಾಜ್ಯೋತ್ಸವ ನಿಮಿತ್ತ ರಜೆ. ಶನಿವಾರ ತಿಂಗಳ ಕೊನೆ ಶನಿವಾರವೆಂಬ ಕಾರಣಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ರಜೆಯಿರುತ್ತದೆ. ಭಾನುವಾರ ಮಾಮೂಲಿನ ರಜೆ. ಹೀಗಾಗಿ ಇಂದು ಬ್ಯಾಂಕ್ ಕೆಲಸ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಸೋಮವಾರವಷ್ಟೇ ಸಾಧ್ಯವಾಗುತ್ತದೆ. ಹಾಗಾಗಿ ತುರ್ತು ಕೆಲಸಗಳಿಗೆ ಇಂದೇ ತೆರಳಿ.