10 ರೂ. ನಾಣ್ಯ ನಿಜವಾಗಿಯೂ ನಿಷೇಧವಾಗಿದೆಯಾ? ಆರ್ ಬಿಐ ಹೇಳಿದ್ದೇನು?

ಗುರುವಾರ, 18 ಜನವರಿ 2018 (09:25 IST)
ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಯಾವುದೇ ಅಂಗಡಿಗೆ, ವ್ಯಾಪಾರ ಮಳಿಗೆಗೆ ಹೋಗಿ 10 ರೂ. ನಾಣ್ಯ ನೀಡಿದರೆ ಸ್ವೀಕರಿಸುತ್ತಿಲ್ಲ. ಆದರೆ ಇದಕ್ಕೆಲ್ಲಾ ಆರ್ ಬಿಐ ಸ್ಪಷ್ಟನೆ ಕೊಟ್ಟಿದೆ.
 

ನೋಟು ನಿಷೇಧವಾದ ಬೆನ್ನಲ್ಲೇ 10 ರೂ. ನಾಣ್ಯವನ್ನೂ ವ್ಯಾಪಾರಿಗಳು ತಿರಸ್ಕರಿಸುತ್ತಿದ್ದರು. ಈ ನಾಣ್ಯ ನಿಷೇಧವಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ್ದೇ ಇದಕ್ಕೆಲ್ಲಾ ಕಾರಣ. ಆದರೆ ಇದೀಗ ಆರ್ ಬಿಐ ಸ್ಪಷ್ಟನೆ ಕೊಟ್ಟಿದ್ದು, 10 ರೂ. ನಾಣ್ಯ ನಿಷೇಧವಾಗಿಲ್ಲ ಎಂದಿದೆ.

10 ರೂ. ನಾಣ್ಯ ಚಲಾವಣೆಯಲ್ಲಿದೆ ಮತ್ತು ಮಾನ್ಯತೆ ಪಡೆದಿದೆ. ಇದನ್ನು ಈಗಲೂ ಚಲಾವಣೆ ಮಾಡಬಹುದು. ಇದು ಕಾನೂನು ಬಾಹಿರವಲ್ಲ. ವದಂತಿಗಳಿಗೆ ಕಿವಿಗೊಡಬೇಕಿಲ್ಲ ಎಂದು ಆರ್ ಬಿಐ ಸ್ಪಷ್ಟನೆ ಕೊಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ