ಲೈವ್ ಸ್ಟ್ರೀಮಿಂಗ್ ಗೆ ಹೊಸ ನಿಯಮ ಜಾರಿಗೆ ತಂದ ಫೇಸ್ ​ಬುಕ್​. ನಿಯಮ ಮೀರಿದರೆ ಏನಾಗುತ್ತದೆ ಗೊತ್ತಾ?

ಶನಿವಾರ, 18 ಮೇ 2019 (09:33 IST)
ನವದೆಹಲಿ : ಫೇಸ್ ​ಬುಕ್​ ನ ನೇರ ಪ್ರಸಾರ (ಲೈವ್ ಸ್ಟ್ರೀಮಿಂಗ್) ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಇದೀಗ ನೇರ ಪ್ರಸಾರ (ಲೈವ್ ಸ್ಟ್ರೀಮಿಂಗ್​) ಕ್ಕೆ ಹೊಸ  ನಿಯಮಗಳನ್ನು ಜಾರಿಗೆ ತಂದಿದೆ.




ಹೊಸ ನಿಯಮದ ಪ್ರಕಾರ ಫೇಸ್​ ಬುಕ್ ಬಳಕೆದಾರರು ಯಾವುದೇ ರೀತಿಯ ಹಿಂಸಾ ಪ್ರವೃತ್ತಿಯ ವಿಡಿಯೋಗಳನ್ನು ಲೈವ್ ಮಾಡುವುದು ಹಾಗೂ ಶೇರ್ ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಬಳಕೆದಾರರು ಈ ನಿಯಮಗಳನ್ನು ಮೀರಿದರೆ, ಅಂತಹ ಖಾತೆಯನ್ನು ಬ್ಲಾಕ್ ಮಾಡಲಾಗುವುದು ಎಂದು ಫೇಸ್​ ಬುಕ್ ಎಚ್ಚರಿಕೆ ನೀಡಿದೆ.


ಇತ್ತೀಚೆಗೆ ನ್ಯೂಜಿಲೆಂಡ್​ನ ಕ್ರೈಸ್ಟ್​ಚರ್ಚ್​ ಮಸೀದಿ ಮೇಲೆ ನಡೆದ ಭಯೋತ್ಪಾದಕ ದಾಳಿ ವೇಳೆ ಉಗ್ರನು ತನ್ನ ಕುಕೃತ್ಯವನ್ನು ಲೈವ್​ ಸ್ಟೀಮಿಂಗ್ ಮಾಡಿದ್ದು, ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಇಂತಹ ಚಟುವಟಿಕೆಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು . ಆದಕಾರಣ  ಇದೀಗ ಫೇಸ್​ಬುಕ್ ತನ್ನ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ