ಸಿದ್ದರಾಮಯ್ಯರಿಂದ ಹೈಕಮಾಂಡ್ ಗೆ ಬ್ಲಾಕ್ ಮೇಲ್?

ಗುರುವಾರ, 16 ಮೇ 2019 (15:25 IST)
ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಹೆಚ್.ವಿಶ್ವನಾಥ್, ಸಿದ್ದರಾಮಯ್ಯ, ಜಿ. ಪರಮೇಶ್ವರ್, ಡಿ.ಕೆ. ಶಿವಕುಮಾರ್ ಹೇಳಿಕೆಗಳಿಂದ ಗೊಂದಲ‌ ಇರುವುದು ಸ್ಪಷ್ಟವಾಗುತ್ತೆ. ಹೀಗಂತ ಬಿಜೆಪಿ ಸಂಸದೆ ಹೇಳಿದ್ದಾರೆ.

ಸಿಎಮ್ ಆಗುವ ಆಸೆಯಿಂದ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಸಂಸದೆ‌ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

ಕುಮಾರಸ್ವಾಮಿ ಅಪ್ಪ,‌ ಮಗ, ಅಣ್ಣನ ಮಗನ ಚುನಾವಣೆ ಮಾಡಿ ಸುಸ್ತಾದ್ರಾ? ಸಮ್ಮಿಶ್ರ ಸರ್ಕಾರ ನಡೆಸಲಾಗದೆ ಸುಸ್ತಾದ್ರಾ? ಸ್ಪಷ್ಟನೆ ಕೊಡಲಿ ಎಂದು ಆಗ್ರಹ ಮಾಡಿದ್ರು.

ಖರ್ಗೆಯಂತ ಹಿರಿಯ ನಾಯಕರು ಮುಖ್ಯಮಂತ್ರಿ ಆಗಬೇಕಿತ್ತು. 80 ಸ್ಥಾನ ಗೆದ್ದಂತಹ ಕಾಂಗ್ರೆಸ್‌ಗೆ ಸಿಎಮ್ ಸ್ಥಾನ ಕೊಡಿ. ಕುಮಾರಸ್ವಾಮಿಯವ್ರೆ ರಾಜಿನಾಮೆ ಕೊಡ್ರಿ ಎಂದು ಒತ್ತಾಯ ಮಾಡಿದ್ರು. ದಯಮಾಡಿ ಮಲ್ಲಿಕಾರ್ಜುನ್ ಖರ್ಗೆಯವರನ್ನು ಸಿಎಮ್ ಎಂದು ಘೋಷಣೆ ಮಾಡಿ ಅಂತ ಶೋಭಾ ಹೇಳಿದ್ರು.

ಚುನಾವಣೆ ಬಂದಾಗ ಮಲ್ಲಿಕಾರ್ಜುನ ಖರ್ಗೆಯವರ ನೆನಪಾಗುತ್ತೆ. ಸಿಎಮ್ ಆಗಲು ಸಿದ್ದರಾಮಯ್ಯ ಷಡ್ಯಂತ್ರ ಮಾಡುತ್ತಿದ್ದಾರೆ. ತನ್ನ ಬೆಂಬಲಿಗರನ್ನು ಎತ್ತಿಕಟ್ಟಿ ಸರ್ಕಾರ ಅತಂತ್ರ ಮಾಡುತ್ತಿದ್ದಾರೆ.

ಈಗ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೊಸ ವರಸೆ ಆರಂಭಿಸಿದ್ದಾರೆ‌. ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್‌ನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಅಂತ ಶೋಭಾ ಕರಂದ್ಲಾಜೆ ಟೀಕೆ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ