'ನ್ಯಾಷನಲ್ ಶಾಪಿಂಗ್ ಡೇಸ್' ಸೇಲ್ ‘ ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ ಫ್ಲಿಪ್‌ಕಾರ್ಟ್
ಮಂಗಳವಾರ, 6 ಆಗಸ್ಟ್ 2019 (08:58 IST)
ನವದೆಹಲಿ : ಜನಪ್ರಿಯ ಆನ್ ಲೈನ್ ತಾಣವಾದ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗಾಗಿ 'ನ್ಯಾಷನಲ್ ಶಾಪಿಂಗ್ ಡೇಸ್' ಸೇಲ್ ಎಂಬ ಹೊಸ ಆಫರ್ವೊಂದನ್ನು ನೀಡುತ್ತಿದೆ.
ಆಗಸ್ಟ್ 8ರಿಂದ ಆಗಸ್ಟ್ 10ರವರೆಗೆ ಮೂರು ದಿನ ಫ್ಲಿಪ್‌ಕಾರ್ಟ್ ನ್ಯಾಶನಲ್ ಶಾಪಿಂಗ್ ಡೇಸ್ ಆಯೋಜಿಸುತ್ತಿದ್ದು, ಈ ವೇಳೆ ಗ್ರಾಹಕರು ಐಸಿಸಿಐ ಬ್ಯಾಂಕ್ ಕಾರ್ಡ್ ಬಳಸಿ ವಸ್ತುಗಳನ್ನು ಖರೀದಿಸಿದರೆ, ಅವರಿಗೆ ಶೇ.10ರಷ್ಟು ಡಿಸ್ಕೌಂಟ್ ನೀಡುತ್ತಿದೆ.
ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಆಗಸ್ಟ್ 7ರಂದೇ, ಒಂದು ದಿನ ಮುಂಚಿತವಾಗಿ ಆಫರ್ ಪ್ರಯೋಜನ ದೊರೆಯಲಿದೆ. ಅಲ್ಲದೇ ಇದರಲ್ಲಿ ಸ್ಮಾರ್ಟ್ಫೋನ್, ಟ್ಯಾಬ್ಲೆಟ್, ಲ್ಯಾಪ್ಟಾಪ್, ಟಿವಿ, ಸ್ಟೀಕರ್ಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ.
ಜೊತೆಗೆ ಫ್ಲಿಪ್‌ಕಾರ್ಟ್ ಸೂಪರ್ ಕಾಯಿನ್ಸ್ ಬಳಸಿ ಗ್ಯಾಜೆಟ್ಗಳನ್ನು ಖರೀದಿಸಬಹುದಾಗಿದೆ. ಅದರ ಜತೆ ಆಯ್ದ ಗ್ಯಾಜೆಟ್‌ಗಳ ಮೇಲೆ ಹೆಚ್ಚುವರಿ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್, ಕ್ಯಾಶ್‌ಬ್ಯಾಕ್ ಕೊಡುಗೆಗಳು ಲಭ್ಯವಿದೆ.