ಫ್ಲಿಪ್‌ಕಾರ್ಟ್‌ನಲ್ಲಿ ಶೇ.20-30ರಷ್ಟು ನೇಮಕಾತಿ ಹೆಚ್ಚಳ

ಸೋಮವಾರ, 6 ಮಾರ್ಚ್ 2017 (08:50 IST)
ಪ್ರಮುಖ ಇ-ಕಾಮರ್ಸ್ ದಿಗ್ಗಜ ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್ ಕಂಪೆನಿ ಈ ವರ್ಷ ಶೇ.20-30ರಷ್ಟು ಹೆಚ್ಚಿನ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಎಂದು ತಿಳಿಸಿದೆ. ಆದರೆ ಇನ್ನೊಂದು ಇ-ಕಾಮರ್ಸ್ ಕಂಪೆನಿ ಸ್ನ್ಯಾಪ್ ಡೀಲ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
 
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫ್ಲಿಪ್‌ಕಾರ್ಟ್ ಹೆಚ್ಚಿನ ನೇಮಕಾತಿ ಮಾಡಿಕೊಳ್ಳಲಿದೆ. ಕಳೆದ ವರ್ಷ 1,500 ಉದ್ಯೋಗಿಗಳನ್ನು ನೇಮಿಸಿಕೊಂಡಿತ್ತು. ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ವ್ಯವಹಾರ ನಡೆಸುವ ಸಲುವಾಗಿ 10,000 ತಾತ್ಕಾಲಿಕ ಸಿಬ್ಬಂದಿಯನ್ನು ನೇಮಿಸಿಕೊಂಡಿತ್ತು. 
 
ಫ್ಲಿಪ್‌ಕಾರ್ಟನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದೇವೆ. ಈ ನಿಟ್ಟಿನಲ್ಲಿ ಪ್ರತಿಭಾವಂತರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ ಕಂಪೆನಿ ಸಿಇಓ ನಿತಿನ್ ಸೇಠ್. ಅಮೆರಿಕದ ಅಮೆಜಾನ್ ಜತೆಗೆ ಫ್ಲಿಪ್‌ಕಾರ್ಟ್ ಸ್ಪರ್ಧೆಗೆ ಇಳಿದಿರುವುದು ಗೊತ್ತೇ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ