ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಇದೀಗ ಎಸ್‌ಎಂಎಸ್ ಸೌಲಭ್ಯ

ಬುಧವಾರ, 22 ಜೂನ್ 2016 (15:43 IST)
ದೈತ್ಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಆಂಡ್ರಾಯ್ಡ್ ಮೆಸೆಂಜರ್‌ ಸೇವೆಯಲ್ಲಿ ಎಸ್‌ಎಮ್‌ಎಸ್ ಸೌಲಭ್ಯವನ್ನು ಸಕ್ರಿಯಗೊಳಿಸಿದೆ. ಇದೀಗ ಬಳಕೆದಾರರು ಸಂದೇಶ ಕಳುಹಿಸುವುದು ಮತ್ತು ಪಡೆಯಬಹುದಾಗಿದೆ.
 
ಈ ಸೌಲಭ್ಯ ಕೇವಲ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದ್ದು, ನೀವು ಕಳುಹಿಸುವ ಸಂದೇಶವನ್ನು ಸ್ಪೀಕರಿಸುವವರು ಯಾವುದೇ ಸ್ಥಳದಲ್ಲಿದ್ದರೂ ನೀವು ಸಂದೇಶವನ್ನು ರವಾನಿಸಬಹುದಾಗಿದೆ.
 
ಈ ಹೊಸ ಆಯ್ಕೆಯಿಂದಾಗಿ ಬಳಕೆದಾರರು ಒಂದು ಕಡೆ ಎಲ್ಲಾ ಸಂದೇಶಗಳನ್ನು ಪಡೆಯಬಹುದಾಗಿದೆ. ಸಂಭಾಷಣೆ ನಡೆಸುವುದು ಕೂಡಾ ಮತ್ತಷ್ಟು ಸರಳವಾಗಿದೆ ಎಂದು ಫೇಸ್‌ಬುಕ್ ಹೇಳಿಕೊಂಡಿದೆ.
 
ಈ ಹೊಸ ಸೌಲಭ್ಯ ಹೇಗೆ ಕಾರ್ಯನಿರ್ವಹಿಸುತ್ತದೆ.
 
ನಿಮ್ಮ ಪೋನ್‌ನಲ್ಲಿ ಮೆಸೆಂಜರ್ ಅಪ್ಲಿಕೇಶನ್‌ ಓಪನ್ ಮಾಡಿ. ಸೆಟ್ಟಿಂಗ್ ಆಯ್ಕೆಯನ್ನು ಆಯ್ದುಕೊಂಡು ಲಿಸ್ಟ್‌ನಲ್ಲಿ ಬರುವ ಎಸ್‌ಎಮ್‌ಎಸ್‌ನ್ನು ಸಕ್ರೀಯಗೊಳಿಸಿ. 
 
ಇದೀಗ ಬಳಕೆದಾರರು ಮೆಸೆಂಜರ್‌ನಲ್ಲಿ ಎಸ್ಎಮ್‌ಎಸ್ ಸಂಭಾಷಣೆ ಮತ್ತು ಪ್ರತಿಕ್ರಿಯೆಯನ್ನು ಕಾಣಬಹುದಾಗಿದೆ. ಇಲ್ಲಿ ಎಸ್ಎಮ್‌ಎಸ್ ಸಂಭಾಷಣೆ ಆಯ್ಕೆ ನೇರಳೆ ಬಣ್ಣದಲ್ಲಿ ಗೋಚರವಾದರೆ, ಮೆಸೆಂಜರ್ ಸಂಭಾಷಣೆ ನೀಲಿ ಬಣ್ಣದಲ್ಲಿ ಗೋಚರವಾಗುತ್ತದೆ.
 
ಮೆಸೆಂಜರ್‌ನಲ್ಲಿರುವ ಎಸ್‌ಎಮ್‌ಎಸ್ ಗುಣಮಟ್ಟದ ಪಠ್ಯ, ಚಿತ್ರಗಳು, ವೀಡಿಯೊ ಮತ್ತು ಆಡಿಯೋಗಳನ್ನು ರವಾನಿಸಲು ಸ್ಪಂದಿಸದಿದ್ದರು, ಸ್ಟಿಕ್ಕರ್‌ಗಳು, ಎಮೊಜಿ ಮತ್ತು ಸ್ಥಳ ಹಂಚಿಕೆಗಳಿಗೆ ಸ್ಪಂದಿಸುತ್ತದೆ.
 
ಬಳಕೆದಾರರು ಸಾಮಾನ್ಯ ಮೆಸೆಂಜರ್ ಅಪ್ಲಿಕೇಶನ್ ಬಳಸಿಕೊಂಡು ಜಿಐಎಫ್, ಸೆಂಡ್ ಮನಿ, ಧ್ವನಿ ಮತ್ತು ವೀಡಿಯೊ ಕರೆಯನ್ನು ಬಳಸಬಹುದಾಗಿದೆ.
 
ಮೆಸೆಂಜರ್ ಅಪ್ಲಿಕೇಶನ್‌ನಲ್ಲಿರುವ ಎಸ್‌ಎಮ್‌ಎಸ್ ಆಯ್ಕೆಯಿಂದ ಸಂದೇಶ ರವಾನೆ, ಅಪ್‌ಲೋಡ್ ಮತ್ತು  ಬಳಕೆದಾರರ ಸಂಭಾಷಣೆಯನ್ನು ಫೇಸ್‌ಬುಕ್ ಸರ್ವರ್‌ಗೆ ರವಾನೆ ಮಾಡುವುದಿಲ್ಲ ಎನ್ನಲಾಗಿದೆ.
 
ಬಳಕೆದಾರರು ಎಲ್ಲಾ ಸಂದೇಶ ರವಾನೆ ಮತ್ತು ಸಂದೇಶ ಸ್ಪೀಕಾರವನ್ನು ಎಸ್‌ಎಮ್‌ಎಸ್ ಮೂಲಕವೇ ಮಾಡಬಹುದಾಗಿದೆ. ಈ ಹೊಸ ಸೌಲಭ್ಯದಲ್ಲಿ ಸ್ಟಾಂಡರ್ಡ್ ಎಸ್‌ಎಮ್‌ಎಸ್, ಸಾಮಾನ್ಯ ಎಸ್‌ಎಮ್‌ಎಸ್‌ಗಳಿಗೆ ಶುಲ್ಕ ಅನ್ವಯವಾಗುತ್ತದೆ ಎಂದು ಫೇಸ್‌ಬುಕ್ ತಿಳಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ