Arecanut price today: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್

Krishnaveni K

ಶುಕ್ರವಾರ, 27 ಜೂನ್ 2025 (11:40 IST)
ಬೆಂಗಳೂರು: ಹಲವು ದಿನಗಳ ನಂತರ ನಿನ್ನೆ ಅಡಿಕೆ ಬೆಲೆ ಏರಿಕೆಯಾಗಿ ರೈತರ ಮೊಗದಲ್ಲಿ ಸಂತಸ ಮೂಡಿತ್ತು. ಆದರೆ ಇಂದು ಮತ್ತೆ ಅಡಿಕೆ ಬೆಲೆ ಏರಿಕೆಯೂ ಆಗದೇ ಇಳಿಕೆಯೂ ಆಗದ ಸ್ಥಿತಿಯಲ್ಲಿದೆ. ಆದರೆ ಕೊಬ್ಬರಿ ಬೆಳೆಗಾರರಿಗೆ ಇಂದು ಬಂಪರ್ ಬೆಲೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.

ಮೊನ್ನೆಯಷ್ಟೇ ಏರಿಕೆಯಾಗಿದ್ದ ಅಡಿಕೆ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ಎರಡು ದಿನಗಳಿಂದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಹೊಸ ಅಡಿಕೆ ಬೆಲೆ ನಿನ್ನೆ  485 ರೂ.ಗಳಷ್ಟಿತ್ತು. ಇಂದೂ ಬೆಲೆ ಅಷ್ಟೇ ಇದೆ. ಹಳೆ ಅಡಿಕೆ ಬೆಲೆ ಏರಿಕೆ-ಇಳಿಕೆಯಾಗದೇ ಗರಿಷ್ಠ 520 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 520 ರೂ.ಗಳಾಗಿವೆ.

ಹೊಸ ಪಟೋರ  ದರ ಮತ್ತು ಹಳೆ ಪಟೋರ ದರ ತಲಾ 365 ರೂ.ಗಳಷ್ಟಿತ್ತು. ನಿನ್ನೆ ಇವೆರಡರ ಬೆಲೆ ತಲಾ 5 ರೂ.ಗಳಷ್ಟು ಏರಿಕೆಯಾಗಿ 370 ರೂ.ಗಳಾಗಿತ್ತು. ಇಂದೂ ಅದೇ ಬೆಲೆಯಿದೆ.  ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು.  ಇಂದೂ ಅದೇ ರೀತಿ ಮುಂದುವರಿದಿದೆ. ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ಈಗ 240 ರೂ.ಗಳಷ್ಟೇ ಇದೆ. ಹೊಸ ಕೋಕ ಮತ್ತು ಹಳೆ ಕೋಕ ದರವೂ ವ್ಯತ್ಯಾಸವಾಗಿಲ್ಲ. ಇದು ತಲಾ 305 ರೂ.ಆಗಿದೆ.
ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ದರದಲ್ಲೂ ಬಹಳ ದಿನಗಳ ನಂತರ ಕೊಂಚ ಏರಿಕೆಯಾಗಿತ್ತು. ಇಂದು ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ 650 ರೂ.ಗಳಷ್ಟಿವೆ. ಆದರೆ ಕೊಬ್ಬರಿ ಬೆಳೆಗಾರರಿಗೆ ಮಾತ್ರ ಬಂಪರ್. ಇಂದು ಮತ್ತೊಮ್ಮೆ ಬೆಲೆ ಭರ್ಜರಿ 20 ರೂ.ಗಳಷ್ಟು ಏರಿಕೆ ಕಂಡಿದೆ. ನಿನ್ನೆ 250 ರೂ. ತಲುಪಿದ್ದ ಒಣ ಕೊಬ್ಬರಿ ಬೆಲೆ ಇಂದು 270 ರೂ.ಗಳಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ