Gold Price today: ಚಿನ್ನ ಖರೀದಿದಾರರಿಗೆ ಇಂದು ಸ್ವಲ್ಪ ಸಿಹಿ ಸ್ವಲ್ಪ ಕಹಿ

Krishnaveni K

ಶುಕ್ರವಾರ, 16 ಮೇ 2025 (12:01 IST)
ಬೆಂಗಳೂರು: ಸತತ ಎರಡನೇ ದಿನವೂ ಪರಿಶುದ್ಧ ಚಿನ್ನದ ದರದಲ್ಲಿ ಇಳಿಕೆಯಾಗಿದ್ದು ಗ್ರಾಹಕರಿಗೆ ನಿಜಕ್ಕೂ ಗುಡ್ ನ್ಯೂಸ್ ಸಿಕ್ಕಂತಾಗಿದೆ.  ಆದರೆ ಇತರೆ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು ಕಹಿ ಸುದ್ದಿಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ವಾರ ಚಿನ್ನದ ಬೆಲೆ ಸತತವಾಗಿ ಏರಿಕೆಯಾಗುತ್ತಲೇ ಇತ್ತು. ಒಮ್ಮೆಯಂತೂ 99.9 ಪರಿಶದ್ಧತೆಯ ಚಿನ್ನದ ಬೆಲೆ 1,00,730 ರೂ.ಗಳಾಗಿತ್ತು. ಆದರೆ ಇದೀಗ ಪರಿಶುದ್ಧ ಚಿನ್ನದ ಬೆಲೆ ಭಾರೀ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ  95,500.00 ರೂ.ಗೆ ಬಂದು ನಿಂತಿದೆ.

ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 110 ರೂ. ನಷ್ಟು ಏರಿಕೆಯಾಗಿದ್ದು 8,720 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 120 ರೂ. ನಷ್ಟು ಇಳಿಕೆಯಾಗಿದ್ದು 9,513 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 90 ರೂ. ನಷ್ಟು ಏರಿಕೆಯಾಗಿದ್ದು 7,135 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ದರ ಮೊನ್ನೆಯಿಂದ ಇಳಿಕೆಯತ್ತ ಸಾಗಿತ್ತು.  ಆದರೆ ಮೊನ್ನೆ ಬೆಳ್ಳಿ ದರ ಭಾರೀ ಏರಿಕೆಯಾಗಿತ್ತು. ಇಂದು ಬೆಳ್ಳಿ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ. ಇಂದಿನ ಬೆಳ್ಳಿ ದರ ಪ್ರತೀ ಕೆ.ಜಿ.ಗೆ 97,000 ರೂ.ಗಳಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ