Gold Price today: ಚಿನ್ನದ ದರ ಇಂದು ಮತ್ತಷ್ಟು ಕಡಿಮೆ

Krishnaveni K

ಮಂಗಳವಾರ, 10 ಜೂನ್ 2025 (10:59 IST)
ಬೆಂಗಳೂರು: ಕಳೆದ ವಾರವಿಡೀ ಚಿನ್ನದ ದರ ಸತತವಾಗಿ ಏರಿಕೆಯಾಗುತ್ತಲೇ ಇತ್ತು. ಪರಿಶುದ್ಧ ಚಿನ್ನದ ದರ ಲಕ್ಷದಲ್ಲಿತ್ತು. ಈ ವಾರದ ಆರಂಭದ ದಿನದಲ್ಲೇ ಕೊಂಚ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಚಿನ್ನದ ದರ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣವಿಲ್ಲ ಎಂದು ಗ್ರಾಹಕರಿಗೆ ಆತಂಕವಾಗಿತ್ತು. ಕಳೆದ ವಾರ ಸತತವಾಗಿ ಚಿನ್ನದ ದರ ಏರಿಕೆಯಾಗಿತ್ತು. ಆದರೆ ಈಗ ವಾರದ ಆರಂಭದಲ್ಲೇ ಕೊಂಚ ಇಳಿಕೆ ಕಂಡುಬರುತ್ತಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತಷ್ಟು ಕಡಿಮೆಯಾಗಿದೆ. ನಿನ್ನೆ ಪರಿಶುದ್ಧ ಚಿನ್ನದ ದರ 99,160.00 ರೂ.ಗಳಷ್ಟಿತ್ತು. ಇಂದು 99,110.00 ರೂ.ಗಳಿಗೆ ಬಂದು ನಿಂತಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 11 ರೂ. ಇಳಿಕೆಯಾಗಿದ್ದು 9,758 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 10 ರೂ. ಇಳಿಕೆಯಾಗಿದ್ದು 8,945 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 8 ರೂ. ಇಳಿಕೆಯಾಗಿದ್ದು 7,319 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಕೊಂಚವೇ ಏರಿಕೆಯಾಗುತ್ತಲೇ ಇದೆ. ಕಳೆದ ವಾರವೇ ಲಕ್ಷ ಮೀರಿದ್ದ ಬೆಳ್ಳಿ ದರ ಇನ್ನೂ ಕಡಿಮೆಯಾಗಿಲ್ಲ. ಇಂದೂ ಮತ್ತೊಮ್ಮೆ ಬೆಳ್ಳಿ ದರ ಪ್ರತೀ ಕೆ.ಜಿ.ಗೆ 100 ರೂ. ಗಳಷ್ಟು ಏರಿಕೆಯಾಗಿದೆ. ಬೆಳ್ಳಿ ದರ ಇಂದು 1,08, 100 ರೂ.ಗಳಷ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ