ಬೆಂಗಳೂರು: ಕಳೆದ ಎರಡು ದಿನಗಳಿಂದ ಸ್ವಲ್ಪವೇ ಏರಿಕೆಯಾಗಿದ್ದ ಚಿನ್ನದ ದರ ಇಂದು ಏಕಾಏಕಿ ಭಾರೀ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಕಳೆದ ವಾರಂತ್ಯಕ್ಕೆ ಲಕ್ಷದ ಗಡಿ ದಾಟಿದ್ದ ಪರಿಶುದ್ಧ ಚಿನ್ನದ ದರ ಕಳೆದ ಎರಡು ದಿನಗಳಿಂದ ಕೊಂಚ ಇಳಿಕೆಯಾಗಿ ಸ್ವಲ್ಪ ನೆಮ್ಮದಿ ಮೂಡಿತ್ತು. ಆದರೆ ಎರಡು ದಿನಗಳಿಂದ ಸ್ವಲ್ಪವೇ ಎನ್ನುವಷ್ಟು ಏರಿಕೆಯಾಗುತ್ತಲೇ ಇತ್ತು. ಇಂದು ಪರಿಶುದ್ಧ ಚಿನ್ನದ ದರ ಏಕಾಏಕಿ 1 ಲಕ್ಷ ದಾಟಿದೆ. ನಿನ್ನೆ ಪರಿಶುದ್ಧ ಚಿನ್ನದ ದರ 99,600.00 ರೂ.ಗಳಷ್ಟಿತ್ತು. ಇಂದು ಭಾರೀ ಏರಿಕೆಯಾಗಿದ್ದು 1,00, 905.00 ರೂ.ಗಳಿಗೆ ಬಂದು ನಿಂತಿದೆ.
ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭಾರೀ ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 212 ರೂ. ಏರಿಕೆಯಾಗಿದ್ದು 10,140 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 195 ರೂ. ಏರಿಕೆಯಾಗಿದ್ದು 9,295 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 159 ರೂ. ಏರಿಕೆಯಾಗಿದ್ದು 7,605 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಕೊಂಚವೇ ಏರಿಕೆಯಾಗುತ್ತಲೇ ಇದೆ. ಕಳೆದ ವಾರವೇ ಲಕ್ಷ ಮೀರಿದ್ದ ಬೆಳ್ಳಿ ದರ ಇನ್ನೂ ಕಡಿಮೆಯಾಗಿಲ್ಲ. ಇಂದೂ ಮತ್ತೊಮ್ಮೆ ಬೆಳ್ಳಿ ದರ ಪ್ರತೀ ಕೆ.ಜಿ.ಗೆ 1,100 ರೂ. ಗಳಷ್ಟು ಏರಿಕೆಯಾಗಿದೆ. ಬೆಳ್ಳಿ ದರ ಇಂದು 1,10, 000 ರೂ.ಗಳಷ್ಟಿದೆ.