ಬೆಂಗಳೂರು: ಚಿನ್ನದ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಇಂದಂತೂ ಪರಿಶುದ್ಧ ಚಿನ್ನದ ಸರ್ವಕಾಲಿಕ ದಾಖಲೆ ಮಾಡಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಚಿನ್ನದ ದರ ಕೇಳಿದರೆ ಈಗ ಶಾಕ್ ಹೊಡೆಯುವಂತಹ ಪರಿಸ್ಥಿತಿ. ಮಧ್ಯಮ ವರ್ಗದವರಿಗಂತೂ ಚಿನ್ನ ಈಗ ಗಗನ ಕುಸುಮ. ಈಗ ಪರಿಶುದ್ಧಚಿನ್ನದ ದರ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಇತರೆ ಚಿನ್ನದ ದದರ ಕೊಂಚ ಇಳಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ಮೊನ್ನೆ 1,09.845.00 ರೂ.ಗಳಷ್ಟಿತ್ತು. ಆದರೆ ಇಂದು ಕೊಂಚ ಏರಿಕೆ ಕಂಡಿದ್ದು, 1,10.395.00 ರೂ.ಗಳಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 11 ರೂ.ಗಳಷ್ಟು ಇಳಿಕೆಯಾಗಿದ್ದು 10,838 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 10 ರೂ.ಗಳಷ್ಟು ಇಳಿಕೆಯಾಗಿದ್ದು 9,935 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು 8 ರೂ.ಗಳಷ್ಟು ಇಳಿಕೆಯಾಗಿದ್ದು 8,129 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರವೂ ಕಳೆದ ವಾರವಿಡೀ ಏರುಗತಿಯಲ್ಲಿತ್ತು. ಈ ವಾರದ ಆರಂಭದಲ್ಲೇ ಮತ್ತೆ ಏರಿಕೆಯಾಗಿದೆ. ಇಂದು ಮತ್ತೆ ಬೆಳ್ಳಿ ದರ ಪ್ರತೀ ಕೆ.ಜಿಗೆ 1,27,000 ರೂ. ಗಳಷ್ಟಿದೆ.